ಬೆಂಗಳೂರು : ಕನ್ನಡ ಸುದ್ದಿ ವಾಹಿನಿ ಟಿವಿ9, ಮತ್ತೆ ಲೈಫ್ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ ಆರಂಬಿಸಿದೆ ಇದೇ ಅಕ್ಟೋಬರ್ 27,28,29ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಲೈಫ್ಸ್ಟೈಲ್, ಆಟೋಮೊಬೈಲ್ ಮತ್ತು ಫರ್ನಿಚರ್ಸ ಎಕ್ಸ್ಪೋ ಏರ್ಪಡಿಸಿದ್ದು, ನಿಮ್ಮ ಕನಸಿನ ಕಾರು, ಬೈಕ್ ಹಾಗೂ ವೈವಿಧ್ಯಮಯ , ಪೀಠೋಪಕರಣಗಳು ಈ ಎಕ್ಸ್ಪೋನಲ್ಲಿ ಲಭ್ಯ ಇರಲಿವೆ.
ಸಿಲಿಕಾನ್ ಸಿಟಿ ಮತ್ತು ಟೆಕ್ನಾಲಜಿ ಹಬ್ ಎಂದೇ ಬೆಂಗಳೂರು ಹೆಸರುವಾಸಿಯಾಗಿದೆ. ವಿವಿಧ ಸ್ಟಾರ್ಟ್ಅಪ್ಗಳು ಮತ್ತು ತಂತ್ರಜ್ಞಾನ ಆಧಾರಿತ ಕಂಪನಿಗಳು ಬೆಂಗಳೂರಿನಲ್ಲಿ ತಮ್ಮ ಪ್ರಧಾನ ಕಛೇರಿಯನ್ನು ಹೊಂದಿವೆ. ಬೆಂಗಳೂರು ತನ್ನ ಕಾಸ್ಮೋಪಾಲಿಟನ್ ಸಂಸ್ಕೃತಿಯಿಂದಾಗಿ ಫ್ಯಾಷನ್ ಕೇಂದ್ರವಾಗಿಯೂ ಹೆಸರುವಾಸಿಯಾಗಿದೆ. ಈ ಹಬ್ಬದ ಸಂಭ್ರಮದದಲ್ಲಿ ರಿಯಾಯಿತಿ ಮತ್ತು ಹಣಕ್ಕೆ ಮೌಲ್ಯದ ಡೀಲ್ಗಳನ್ನು ಹುಡುಕುತ್ತಿರುವವರಿಗೆ, TV9 ಕನ್ನಡ ಲೈಫ್ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ ಆಯೋಜಿಸಿದ್ದು, ಈ ಮೂರು ದಿನ ನಡೆಯಲಿರುವ TV9 ಕನ್ನಡ ಜೀವನಶೈಲಿ ಆಟೋಮೊಬೈಲ್ ಮತ್ತು ಪೀಠೋಪಕರಣಗಳ ಎಕ್ಸ್ಪೋನಲ್ಲಿ ಗ್ರಾಹಕರು ತಮ್ಮ ಅಭಿರುಚಿ, ಬಜೆಟ್ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು.
ಪ್ರಮುಖ ಬ್ರಾಂಡ್ಗಳ ಪ್ರತಿನಿಧಿಗಳೊಂದಿಗೆ ಗ್ರಾಹಕರು ನೇರ ಸಂಪರ್ಕ ಹೊಂದಲು ಎಕ್ಸ್ಪೋ ವೇದಿಕೆ ಮಾಡಿಕೊಡುತ್ತಿದೆ. ಇದರಿಂದ ಮಾರಾಟಗಾರರು ಮತ್ತು ಗ್ರಾಹಕರು ಇಬ್ಬರಿಗೂ ಎಕ್ಸ್ಪೋದಿಂದ ಅನುಕೂಲವಾಗುತ್ತದೆ. ತಮ್ಮ ಮನೆಗೆ ಶಾಪಿಂಗ್ ಮಾಡಲು, ನವೀಕರಿಸಲು ಅಥವಾ ಹೊಸ ವಸ್ತುಗಳನ್ನು ಖರೀದಿಸಲು ಯೋಜಿಸುವವರಿಗೆ ಎಕ್ಸ್ಪೋ ವೇದಿಕೆಯಾಗಿದೆ. ಉತ್ತಮ ಡೀಲ್ಗಳ ಹುಡುಕಾಟದಲ್ಲಿ ಜನರು ಅಲ್ಲಿ ಇಲ್ಲಿ ತಲೆ ಕೆಡಿಸಿಕೊಂಡು ಸುತ್ತಬೇಕಿಲ್ಲ. ಒಂದೇ ಸೂರಿನಡಿ ಈ ಎಕ್ಸ್ಪೋನಲ್ಲಿ ಭಾಗವಹಿಸಿ ನಿಮ್ಮ ಕನಸಿನ ಕಾರು, ಬೈಕ್ ಹಾಗೂ ವೈವಿಧ್ಯಮಯದ ಫರ್ನಿಚರ್ಗಳನ್ನು ನಿಮ್ಮದಾಗಿಸಿಕೊಳ್ಳಿ. ಇನ್ನೇನು ಯೋಚಿಸುತ್ತೀರಿ ಉಚಿತ ಪ್ರವೇಶ ಇವದೆ. ಮೇಲೆ ತಿಳಿಸಲಾದ ದಿನಾಂಕ, ವಿಳಾಸಕ್ಕೆ ಭೇಟಿ ನೀಡಿ.
Be the first to comment