ಸದ್ದು ಮಾಡುತ್ತಿದೆ ತುಫಾನ್ ವಿಡಿಯೋ ಸಾಂಗ್

ಕೆಜಿಎಫ್ 2ರ ತುಫಾನ್ ವಿಡಿಯೋ ಸಾಂಗ್ ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.

ಹಾಡು ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ತೂಫಾನ್ ವಿಡಿಯೋ ಸಾಂಗ್​ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ವಿಡಿಯೋ ಸಾಂಗ್​ ಲಕ್ಷಗಟ್ಟಲೆವೀವ್ಸ್ ಪಡೆದುಕೊಳ್ಳುತ್ತಿದೆ.

ಹಿಂದಿ ಭಾಷೆಯಲ್ಲಿ ತೂಫಾನ್ ಅಬ್ಬರ ಜೋರಾಗಿದ್ದು, ಕನ್ನಡ ಅವತರಣಿಕೆಗಿಂತ ಹೆಚ್ಚಿನ ವೀಕ್ಷಣೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಈ ಹಾಡನ್ನು ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರೇ ಬರೆದು, ಸಂಗೀತ ನೀಡಿದ್ದಾರೆ. ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರ್, ಪುನೀತ್ ರುದ್ರರಂಗ, ವರ್ಷಾ ಆಚಾರ್ಯ ಸೇರಿದಂತೆ ಅನೇಕ ಗಾಯಕರು ದನಿ ನೀಡಿದ್ದಾರೆ.

ಈ ಕನ್ನಡ ಚಿತ್ರ ಸಾವಿರ ಕೋಟಿ ಕಲೆಕ್ಷನ್​ ಮಾಡಿದ ಮೊದಲ ಚಿತ್ರ ಎನಿಸಿದೆ. ರಾಜಾಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ 1000 ಕೋಟಿ ಗಳಿಸಿದ ಮೊದಲ ಚಿತ್ರವಾಗಿದ್ದು, ಎರಡನೇ ಸ್ಥಾನವನ್ನು ಕೆಜಿಎಫ್​ 2 ಅಲಂಕರಿಸಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಇತರರು ನಟಿಸಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!