ನ.3ಕ್ಕೆ ‘TRP ರಾಮ’ ರಾಜ್ಯಾದ್ಯಂತ ಬಿಡುಗಡೆ ;32 ವರ್ಷಗಳ ಬಳಿಕ ನಟಿ ಮಹಾಲಕ್ಷ್ಮೀ ಕಂಬ್ಯಾಕ್ ಚಿತ್ರ!

ಟ್ರೇಲರ್ ಮೂಲಕ ಭಾರೀ ಸದ್ದು ಮಾಡಿರುವ TRP ರಾಮ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನವೆಂಬರ್ 3ರಂದು ರಾಜ್ಯಾದ್ಯಂತ ಚಿತ್ರ ತೆರೆಗೆ ಬರ್ತಿದೆ. ಹಿರಿಯ ನಟಿ ಮಹಾಲಕ್ಷ್ಮಿ ಕಂಬ್ಯಾಕ್ ಮಾಡ್ತಿರುವ TRP ರಾಮ ಸಿನಿಮಾದ ಧರೆಗೆ ದೊಡ್ಡವಳು ಎಂಬ ಹಾಡು ಅನಾವರಣಗೊಂಡಿದೆ. A2 ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಈ ಗೀತೆ ರಿಲೀಸ್ ಆಗಿದ್ದು, ಲಿಂಗರಾಜು-ರವಿ ಪ್ರಸಾದ್ ಹಾಗೂ ಪ್ರವೀಣ್ ಸೂಡ ಸಾಹಿತ್ಯ ಬರೆದಿದ್ದು, ತಾಯಿ ಕುರಿತ ಈ ಹಾಡಿಗೆ ಸಾಧು ಕೋಕಿಲ ಧ್ವನಿಯಾಗಿದ್ದಾರೆ. ರಾಜ್ ಗುರು ಹೊಸಕೋಟೆ ಟ್ಯೂನ್ ಕೂಡ ಗಮನಾರ್ಹ. ಹಾಡು ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಚಿತ್ರತಂಡ ಮಾಧ್ಯಮದರೊಟ್ಟಿಗೆ ಸಾಕಷ್ಟು ಮಾಹಿತಿ ಹಂಚಿಕೊಂಡಿದೆ.

ಹಿರಿಯ ನಟಿ ಮಹಾಲಕ್ಷ್ಷೀ ಮಾತನಾಡಿ, ,30 ವರ್ಷ ಆದ್ಮೇಲೆ ಒಂದೊಳ್ಳೆ ತಂಡದ ಜೊತೆ ಅಭಿನಯಿಸಿರುವ ಖುಷಿ ಇದೆ. ತಾಯಿ ಪಾತ್ರ ಮಾತ್ರವಲ್ಲ, ಇಡೀ ತಂಡ ತಾಯಿ ತರ ನೋಡಿಕೊಂಡರು. ಪ್ರಪಂಚದಲ್ಲಿ ಎರಡು ತರಹದ ಕುಟುಂಬ ಇರುತ್ತದೆ. ಒಂದು ನಾರ್ಮಲ್ ಫ್ಯಾಮಿಲಿ.. ಇನ್ನೊಂದು ಅಬ್ ನಾರ್ಮಲ್ ಫ್ಯಾಮಿಲಿ. ಅಬ್ ನಾರ್ಮಲ್ ಫ್ಯಾಮಿಲಿ ಎದುರಿಸುವ ಕಷ್ಟವನ್ನು ಕಟ್ಟಿಕೊಡುವುದೇ ಸಿನಿಮಾ ಕಥೆ. ಇದೊಂದು ಎಮೋಷನಲ್ ಸ್ಟೋರಿ. ಪ್ರತಿಯೊಬ್ಬರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಆ ಪರಿಶ್ರಮಕ್ಕೆ ಬೆಲೆ ಸಿಗಲಿದೆ ಎಂಬ ನಂಬಿಕೆ ಇದೆ. ಸಮಾಜಕ್ಕೆ ಒಂದೊಳ್ಳೆ ಸಂದೇಶ ಕೊಡುವ ಸಿನಿಮಾ ಇದು ಎಂದರು.

ನಿರ್ದೇಶಕ‌ ಕಂ ನಟ ರವಿ ಪ್ರಸಾದ್ ಮಾತನಾಡಿ, ಕಥೆ ಸಮಯದಿಂದಲೂ, ಸಾಂಗ್ ಬರೆಯುವಾಗಲೂ ಕಣ್ಣೀರು ಬಂದಿದೆ. ಬರೆದು ರಿಪೀಟ್ ಮಾಡುವಾಗ ಎಮೋಷನಲ್ ಆಗಿದ್ದೇನೆ. ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ. ನವೆಂಬರ್ 3ಕ್ಕೆ ತೆರೆಗೆ ಬರ್ತಿದೆ. ಕನ್ನಡ ಚಿತ್ರಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ನಾವು ಅದರಲ್ಲಿ ಒಂದು ಭಾಗವಾಗಿರುವುದಕ್ಕೆ ಖುಷಿ ಇದೆ. ತೆಲುಗು, ಮಲಯಾಳಂ, ತಮಿಳು ಭಾಷೆಗೆ ಡಬ್ ಮಾಡುವ ಪ್ಲಾನ್ ನಲ್ಲಿದ್ದೇವೆ. ಪ್ರಪಂಚದಲ್ಲಿ ನಡೆಯುವ ಸತ್ಯವನ್ನು ಸಿನಿಮಾದಲ್ಲಿ ಹೇಳಿದ್ದೇವೆ. ಸೋಷಿಯಲ್ ಜೊತೆಗೆ ಕಮರ್ಷಿಯಲ್ ಅಂಶಗಳು ಸಿನಿಮಾದಲ್ಲಿವೆ ಎಂದರು.

ಪತ್ರಕರ್ತೆ ಪಾತ್ರದಲ್ಲಿ ನಟಿಸಿರುವ ಸ್ಪರ್ಶ ಮಾತನಾಡಿ, ನವೆಂಬರ್ 3ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಸಾಮಾಜಿಕ ಜವಾಬ್ದಾರಿ ಇಟ್ಟುಕೊಂಡು ಮಾಡಿರುವ ಚಿತ್ರ. ಚಿತ್ರದ ಗೆಲುವಿನ ಜೊತೆಗೆ ಸಮಾಜಕ್ಕೆ ಗೆಲುವು ಸಿಕ್ಕಿದಾಗ ಹಾಗೇ ಎನ್ನುವುದು ನನ್ನ ಅಭಿಪ್ರಾಯ ಎಂದರು.

‘TRP ರಾಮ’ ಸಿನಿಮಾಗೆ ರವಿಪ್ರಸಾದ್‌ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರದಲ್ಲೂ ಅವರು ನಟಿಸಿದಾರೆ. ‘ಅಶುತೋಶ್ ಪಿಕ್ಚರ್ಸ್’ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣವಾಗಿದೆ. ತಾಯಿ ಪಾತ್ರದಲ್ಲಿ ಮಹಾಲಕ್ಷ್ಮಿ ನಟಿಸಿದ್ದಾರೆ. ಪತ್ರಕರ್ತೆಯಾಗಿ ಸ್ಪರ್ಶ ಅಭಿನಯಿಸಿದ್ದಾರೆ.

ರಾಜ್ ಗುರು ಹೊಸಕೋಟೆ ಅವರು ಸಂಗೀತ ನೀಡಿದ್ದಾರೆ. ಸುನಿಲ್ ಕಶ್ಯಪ್ ಅವರು ಸಂಕಲನ ಮತ್ತು ಗುರುಪ್ರಸಾದ್ ಅವರು ಛಾಯಾಗ್ರಹಣ ಮಾಡಿದ್ದಾರೆ. ರಾಕೇಶ್ ಆಚಾರ್ಯ ಅವರ ಹಿನ್ನೆಲೆ ಸಂಗೀತ, ಪ್ರವೀಣ್ ಸೂಡ ಅವರ ಸಂಭಾಷಣೆ ಈ ಚಿತ್ರಕ್ಕಿದೆ.

TRP ಸತ್ಯ ಘಟನೆಗಳನ್ನ ಆಧರಿಸಿ ಬರ್ತಿರೋ ಸಿನಿಮಾ ಆಗಿದೆ. ಚಿತ್ರದ ನಿರ್ದೇಶಕ ರವಿ ಪ್ರಸಾದ್ ಇಲ್ಲಿ ಆ ವಿಕೃತ ರಾಮನ ಪಾತ್ರ ಮಾಡಿದ್ದಾರೆ. ಆದರೆ ಇಲ್ಲಿ “TRP” ಅಂದ್ರೇನೂ ಅನ್ನೋ ಪ್ರಶ್ನೆ ಕುತೂಹಲಕ್ಕೆ ನವೆಂಬರ್ 3ರಂದು ಉತ್ತರ ಸಿಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!