ಇತ್ತೀಚೆಗೆ ತ್ರಿಪುರ ಚಿತ್ರದ ಟ್ರೈಲರ್ ಮತ್ತು ಹಾಡಿನ ಬಿಡುಗಡೆ ಇತ್ತು ಈ ವೇಳೆ ಚಿತ್ರ ತಂಡ ಮಾತಿಗಿಳಿಯಿತು. ನಿರ್ದೇಶಕ ಕೆ.ಶಂಕರ್, ಸಸ್ಪೆನ್ಸ್ ಚಿತ್ರ, ಸಿನಿಮೀಯ ಬದಲಾವಣೆಯೊಂದಿಗೆಗೆ 45 ದಿನಗಳ ಕಾಲ ಮಂಗಳೂರು,ಕಾವೇರಿ ನದಿ ತೀರ, ನಂದಿಬೆಟ್ಟ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಒಂದೇ ಹಾಡಿದ್ದು ಕುತೂಹಲಕಾರಿಯಾಗಿ ಚಿತ್ರವನ್ನು ಕಟ್ಟಿ ಕೊಡಲಾಗಿದೆ.
ತ್ರಿಪುರ ಕಾಲ್ಪನಿಕ ಕತೆ,ಸರಿ ಸುಮಾರು 500 ವರ್ಷಗಳ ಹಿಂದೆ ಎರಡು ಸಾಮ್ರಾಜ್ಯದ ರಾಜರು ತ್ರಿಪುರ ಸುಂದರಿಗಾಗಿ ನಡೆಯುವ ಕಥೆ, ಯುದ್ದ ಸಾರಿ ಒಬ್ಬ ಸಾಮ್ರಾಜ್ಯ ಕಳೆದುಕೊಂಡ ಕಥೆಯೇ ಚಿತ್ರದ ಜೀವಾಳ.ಈಗಿನಕಾಲ ಘಟ್ಟಕ್ಕೆ ಹೊಂದುವಂತೆ ಸಿನಿಮಾ ಮಾಡಲಾಗಿದೆ.ಇದೊಂದು ಮರ್ಡರ್ ಮಿಸ್ಟ್ರಿ ಕಥೆಯನ್ನು . ಅಶ್ವಿನಿ ಗೌಡ ಸಾಮ್ರಾಜ್ಯ ಕಳೆದುಕೊಂಡ ರಾಜ ಮನೆತದವರು. ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಮುಂದಿನ ತಿಂಗಳು ಚಿತ್ರ ತೆರೆಗೆ ಬರುವ ಸಾದ್ಯತೆಗಲಿವೆ ಎಂದು ಹೇಳಿಕೊಂಡರು.
ನಿರ್ಮಾಪಕ ಹುಲ್ಲೂರು ಮಂಜುನಾಥ್, ಮಿಠಾಯಿ ಮನೆಯಲ್ಲಿ ಪಾತ್ರ ಮಾಡಿದ್ದೆ, ಮಿಂಚುಹುಳ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದೆ.ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು.ನಿಧಿಯ ಸುತ್ತ ಸಾಗುವ ಕಥೆ, ಆರಂಭದಲ್ಲಿ 70 ಲಕ್ಷದಲ್ಲಿ ಚಿತ್ರ ಮಾಡುವುದಾಗಿ ನಿರ್ದೇಶಕರು ಭರವಸೆ ನೀಡಿದ್ದರು.ಈಗ 1 ಕೋಟಿ ದಾಟಿದೆ.ಚಿತ್ರ ಚೆನ್ನಾಗಿ ಬಂದಿದೆ ಎಲ್ಲರ ಸಹಕಾರವಿರಲಿ ಎಂದು ಕೇಳಿಕೊಂಡರು
ಹಿರಿಯ ಕಲಾವಿದ ಡಿಂಗ್ರಿ ನಾಗರಾಜ್,ಕ್ಯಾಂಟೀನ್ ನಡೆಸುವ ಪಾತ್ರ. ಖಾಲಿ ಕೂತಿದ್ದೆ. ಅವಕಾಶ ಬಂತು ಒಪ್ಪಿಕೊಂಡೆ, ನಿರ್ಮಾಪಕರು ಗೊತ್ತಾಗಲಿಲ್ಲ ಆನಂತರ ತಿಳಿಯಿತು. ನೀಟಾಗಿ ಸಿನಿಮಾ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಹಿರಿಯ ಕಲಾವಿದ ರಮಾನಾಥ್, ಮೊದಲು ಪರಾರಿ ವೀರ ಎಂದು ಚಿತ್ರಕ್ಕೆ ಹೆಸರಿಡಲಾಗಿತ್ತು ಆ ಬಳಿಕ ತ್ರಿಪುರ ಎಂದು ಬದಲಾಯಿಸಿದ್ದಾರೆ. ಒಳ್ಳೆಯ ಅವಕಾಶವಿತ್ತು ಎಂದರು.
ನಟ ಶ್ರೀಧರ್, ಮೈಸೂರು ಸೇಲ್ಸ್ ಮ್ಯಾನೇಜರ್ ಪಾತ್ರ. ಮೊದಲ ಚಿತ್ರ ವಿಜ್ಞಾನಿ ಪಾತ್ರ.ಸಾಧನೆಗೆ ಪ್ರಶಸ್ತಿ ಬರುತ್ತದೆ ಅದನ್ನು ಪಡೆಯುತ್ತೇನೋ ಇಲ್ಲವೋ ಎನ್ನುವುದು ಪಾತ್ರದ ತಿರುಳು ಎಂದರು.ಬಿ.ಅರ್ ಹೇಮಂತ್ ಕುಮಾರ್ ,ಸಂಗೀತದಲ್ಲಿ ಒಂದು ಹಾಡಿದೆ. ಐಟಂ ಸಾಂಗ್ ಚೆನ್ನಾಗಿ ಬಂದಿದೆ ಎಂದರು.
ಹಿರಿಯ ನಟ ಧರ್ಮ,ಪೊಲೀಸ್ ಅಧಿಕಾರಿಯ ಪಾತ್ರ ಎಂದು ಹೇಳಿ ಕೊಂಡರು.
ಅಂಕುರ ಕ್ರಿಯೇಷನ್ ಲಾಂಚನದಡಿ ಮಂಜುನಾಥ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಕಥೆ,ಚಿತ್ರಕತೆ ನಿರ್ದೇಶನ ಕೆ.ಶಂಕರ್, ಗೌರಿವೆಂಕಟೇಶ್ ಛಾಯಾಗ್ರಹಣ, ಬಿ.ಆರ್ ಹೇಮಂತ್ ಕುಮಾರ್ ಸಂಗೀತ, ಹರಿಕೃಷ್ಣ ನೃತ್ಯ ನಿರ್ದೇಶನ, ರಾಜಶೇಖರ್ ಸಂಕಲನವಿದೆ
ತಾರಾಗಣದದಲ್ಲಿ ಆಶ್ವಿನಿ ಗೌಡ ,ಶ್ರೀಧರ್, ಧರ್ಮ,ಟೆನ್ನಿಸ್ ಕೃಷ್ಣ, ರಮಾನಂದ್, ಡಿಂಗ್ರಿನಾಗರಾಜ್, ಥ್ರಿಲ್ಲರ್ ವೆಂಕಟೇಶ್ ಸೇರಿ ಮುಂತದವರ ತಾರಾಬಳಗವಿದೆ.
Be the first to comment