ಏಪ್ರಿಲ್ 1ಕ್ಕೆ ತ್ರಿಕೋನ ತೆರೆಗೆ

ರಾಗ, ದ್ವೇಷ, ಅಸೂಯೆಯನ್ನು ಗೆದ್ದು ನಿಜವಾದ ಮನುಷ್ಯರಾಗುವ ಬಗ್ಗೆ ಬೆಳಕು ಚೆಲ್ಲುವ ತ್ರಿಕೋನ ಹೆಸರಿನ ಸಿನಿಮಾ ಏಪ್ರಿಲ್ 1ರಂದು ಬಿಡುಗಡೆ ಆಗಲಿದೆ.

‘143’ ಹೆಸರಿನ ಚಿತ್ರ ನಿರ್ದೇಶನ ಮಾಡಿ ಗಮನ ಸೆಳೆದಿದ್ದ ಚಂದ್ರಕಾಂತ್ ಈ ಸಿನಿಮಾದ ಮೂಲಕ ಮನುಷ್ಯ ಬದುಕಿನ ಸಾರ್ಥಕತೆ ಕುರಿತು ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ. ಕಥೆಯನ್ನು ಚಿತ್ರದ ನಿರ್ಮಾಪಕ ರಾಜಶೇಖರ್ ಮಾಡಿದ್ದಾರೆ. ಸ್ವತಃ ನಿರ್ದೇಶಕರಾಗಿರುವ ರಾಜಶೇಖರ್ ಅವರು ನಿರ್ದೇಶನವನ್ನು ಚಂದ್ರಕಾಂತ್ ಅವರಿಗೆ ಬಿಟ್ಟು ಕೊಟ್ಟಿದ್ದಾರೆ.

ಚಿತ್ರದ ಬಿಡುಗಡೆ ಪೂರ್ವ ಪ್ರಚಾರ ಸಭೆಯಲ್ಲಿ ಚಿತ್ರದ ವಿವರಗಳನ್ನು ನೀಡಿದ ನಿರ್ಮಾಪಕ ರಾಜಶೇಖರ್,” ಒಬ್ಬ ನಿರ್ಮಾಪಕ ಹಣ ಹೂಡಬಹುದು. ಆದರೆ ನಿರ್ಮಾಪಕನಾಗಿ ಪ್ರಚಾರ ಮಾಡಿ ಚಿತ್ರವನ್ನು ಗೆಲ್ಲಿಸುವುದು ಕಷ್ಟವಾಗುತ್ತದೆ. ಈ ಚಿತ್ರವನ್ನು ಗೆಲ್ಲಿಸಲೇ ಬೇಕಾಗಿದೆ. ಅದಕ್ಕಾಗಿ ಹೆಚ್ಚು ಪ್ರಚಾರವನ್ನು ಮಾಡಲಿದ್ದೇವೆ. ನಟ ಸುಚ್ಚೇಂದ್ರಪ್ರಸಾದ್ ಚಿತ್ರದ ಪ್ರಚಾರ ರಾಯಭಾರಿ ಆಗಿದ್ದಾರೆ” ಎಂದು ಹೇಳಿದರು.

“ಜೀವನ ಅಂದರೆ ಓಟ. ಆ ಓಟದ ನಡುವೆ ಮನುಷ್ಯನೊಳಗಿನ ರಾಗ, ದ್ವೇಷ, ಅಸೂಯೆಗಳು ಕಾಣುತ್ತವೆ. ಇವುಗಳನ್ನು ನಿಯಂತ್ರಿಸಲು ವಿಶೇಷ ಮನಸ್ಸು ಬೇಕಾಗುತ್ತದೆ. ಚಿತ್ರದಲ್ಲಿ ಮೂರು ‌ಆಯಾಮಗಳು ಇವುಗಳ ಬಗ್ಗೆ ಬೆಳಕು ಚೆಲ್ಲುತ್ತವೆ” ಎಂದು ನಿರ್ದೇಶಕ ಚಂದ್ರಕಾಂತ್ ಹೇಳಿದರು.

ಹಿರಿಯ ನಟ ಸುರೇಶ್ ಹೆಬ್ಳೀಕರ್ ಚಿತ್ರದಲ್ಲಿ ಒಂದು ಒಳ್ಳೆಯ ಪಾತ್ರ ನಿರ್ವಹಿಸಿದ್ದಾರೆ. ಸುಚ್ಚೇಂದ್ರಪ್ರಸಾದ್ ಚಿತ್ರದ ಭಾಗವೇ ಆಗಿದ್ದಾರೆ ಎಂದು ಚಿತ್ರತಂಡ ತಿಳಿಸಿತು. ಹೊಸ ನಟರಾದ ರಾಜ್ ವೀರ್, ಮಾಲತೇಶ್ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.

ಹೆಸರಾಂತ ವಿತರಕ ಭಾಷಾ ಅವರು ತಮ್ಮ ಬಹರ್ ಫಿಲ್ಸಂ ಮೂಲಕ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.
” ಈ ಚಿತ್ರ ಭಾರತದ ಮಟ್ಟದಲ್ಲಿ ಬಿಡುಗಡೆ ಕಾಣುತ್ತದೆ” ಎಂದು ಭಾಷಾ ಹೇಳಿದರು.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!