ಶಿವರಾಜ್‍ಕುಮಾರ್ ಮತ್ತು ಉಪೇಂದ್ರ ಈಗಾಗಲೇ ಒಟ್ಟಾಗಿ ಪ್ರೀತ್ಸೇ&ಲವಕುಶ ಚಿತ್ರದಲ್ಲಿ ನಟಿಸಿದ್ದಾಗಿದೆ. ಮತ್ತೊಂದೆಡೆ, ಸುದೀಪ್&ಉಪೇಂದ್ರ ‘ಮುಕುಂದ ಮುರಾರಿ’ಯಲ್ಲಿ ಸ್ಕ್ರೀನ್‍ಶೇರ್ ಮಾಡಿದ್ರು. ಇಷ್ಟೇ ಅಲ್ಲದೇ ಪ್ರೇಮ್’ಸ್ ಇತ್ತೀಚಿಗೆ ಶಿವರಾಜ್‍ಕುಮಾರ್&ಸುದೀಪ್ ಅವರಿಬ್ಬರನ್ನ ‘ವಿಲನ್’ ಮಾಡುವ ಮೂಲಕ ಒಂದುಗೂಡಿಸಿದ್ದರು. ಆದರೆ, ಸ್ಟಾರ್ ಡೈರೆಕ್ಟರ್ ಆರ್.ಚಂದ್ರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶಿವ+ಉಪ್ಪಿ+ಕಿಚ್ಚ, ಈ ಮೂವರನ್ನೂ ಸೇರಿಸಿ ಒಂದು ಹೈಬಜೆಟ್ ಚಿತ್ರವನ್ನು ಕನ್ನಡಿಗರ ಮುಂದಿಡುವ ಸೂಚನೆ ಕೊಟ್ಟಿದ್ದಾರೆ.
‘ಐಲವ್‍ಯೂ’ ಚಿತ್ರದ ಬಿಡುಗಡೆಯ ನಂತರದಲ್ಲಿ ಒಂದು ಮಲ್ಟಿಸ್ಟಾರ್ ಚಿತ್ರ ನಿರ್ದೇಶಿಸುವುದಾಗಿ ಹೇಳಿರುವ ಚಂದ್ರು, ಆ ಮಲ್ಟಿಸ್ಟಾರ್‍ಗಳು ಯಾರೆಂಬುದನ್ನು ಇನ್ನೂ ಗುಟ್ಟಾಗಿ ಇಟ್ಟಿದ್ದರೂ ಗಾಂಧಿನಗರದಲ್ಲಿ ಅದು ಇನ್ನೂ ಗುಟ್ಟಾಗಿ ಉಳಿದಿಲ್ಲ. ಈ ಮಲ್ಟಿಸ್ಟಾರ್ಸ್ ಸಿನಿಮಾಗಾಗಿ ಚಂದ್ರು ಈಗಾಗಲೇ ಪ್ರೋಡ್ಯೂಸರ್ ಅನ್ನು ಕೂಡ ಖಾತ್ರಿ ಮಾಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಮೂವರು ಬಿಗ್‍ಸ್ಟಾರ್ಸ್‍ಗಳನ್ನು ಒಂದೇ ಫ್ರೇಮ್‍ನಲ್ಲಿ ಸೇರಿಸುವುದು ಎಷ್ಟು ಕಷ್ಟವೂ, ಆ ಮೂವರಿಗೂ ಸರಿಹೊಂದುವಂತಹ ಕಥೆಯನ್ನು ಹೆಣೆಯುವುದೂ ಬಿಗ್ ಟಾಸ್ಕ್. ಆದರೆ, ಚಂದ್ರು ಅಂತಹ ಒಂದು ಡಿಫೆರೆಂಟ್ ಕಥೆಯನ್ನು ಜೊತೆಗಿಟ್ಟುಕೊಂಡೆ ಮಲ್ಟಿಸ್ಟಾರ್ಸ್ ಸಿನ್ಮಾದ ಬಗ್ಗೆ ಮಾತನಾಡಿದ್ದಾರೆ.
ಒಂದಲ್ಲಾ ಒಂದು ಚಿತ್ರದ ಮೂಕ ಸ್ಯಾಂಡಲ್‍ವುಡ್‍ನ ಮೋಸ್ಟ್ ಕ್ರಿಯೇಟೀವ್ ಡೈರೆಕ್ಟರ್ ಅನ್ನಿಸಿಕೊಂಡಿರುವ ಚಂದ್ರು ಈ ಮಲ್ಟಿಸ್ಟಾರ್ಸ್ ಸಿನಮಾದ ಮೂಲಕ ಯಾವ ಮ್ಯಾಜಿಕ್ ಮಾಡುತ್ತಾರೋ ಕಾದುನೋಡಬೇಕಿದೆ.
********
Be the first to comment