ಟ್ರೆಂಡಿಂಗ್ ಆದ ‘ಹೋಮ್ ಮಿನಿಸ್ಟರ್’ ಟ್ರೈಲರ್

ರಿಯಲ್ ಸ್ಟಾರ್’ ಉಪೇಂದ್ರ & ವೇದಿಕಾ ನಟಿಸಿರುವ ಬಹುನಿರೀಕ್ಷಿತ ‘ಹೋಮ್ ಮಿನಿಸ್ಟರ್’ ಸಿನಿಮಾವು ಏಪ್ರಿಲ್‌‌ 1ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಚಿತ್ರದ ಟ್ರೈಲರ್ ಟ್ರೆಂಡಿಂಗ್ ಆಗಿದೆ.

ಉಪ್ಪಿ ನಟನೆಯ ಬಹು ನಿರೀಕ್ಷಿತ ಚಿತ್ರವಾದ ‘ಹೋಮ್ ಮಿನಿಸ್ಟರ್’ ಟ್ರೈಲರ್ 1 ಮಿಲಿಯನ್ ವೀಕ್ಷಣೆ ದಾಟಿದೆ. ಇದು ಚಿತ್ರತಂಡಕ್ಕೆ ಹುಮ್ಮಸ್ಸು ತಂದಿದೆ.
ಈ ಚಿತ್ರದ ಬಗ್ಗೆ ಮಾತನಾಡಿರುವ ಉಪೇಂದ್ರ ‘ಕೊರೊನಾ ಮುನ್ನ ಚಿತ್ರ ಆರಂಭವಾಯಿತು. ಚಿತ್ರದ ಕಥೆ ಕೇಳಿದಾಗ ನನಗೆ ಒಂದು ಕಡೆ ಇಷ್ಟವಾದರೂ, ಅಭಿಮಾನಿಗಳು ಈ ಕಥೆಯನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೋ ಎನ್ನುವ ಭಯ ಇತ್ತು. ನಿರ್ಮಾಪಕ ಪೂರ್ಣಚಂದ್ರ ನಾಯ್ಡು ‘ಈ ಸಿನಿಮಾ ಮಾಡೋಣ. ಎಲ್ಲರಿಗೂ ಹಿಡಿಸುತ್ತದೆ..’ ಎಂದು ಭರವಸೆ ನೀಡಿದರು. ಇದೇ ಏಪ್ರಿಲ್ 1ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಜನ ಮೆಚ್ಚಿಕೊಳ್ಳುತ್ತಾರೆಂಬ ನಿರೀಕ್ಷೆ ಇದೆ. ನನ್ನೊಂದಿಗೆ ನಟಿಸಿರುವ ವೇದಿಕಾ, ತಾನ್ಯ ಹೋಪ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ’ ಎಂದಿದ್ದಾರೆ.

ಚಿತ್ರದ ಬಗ್ಗೆ ಮಾತನಾಡಿರುವ ನಾಯಕ ನಟಿ ವೇದಿಕಾ ‘ ಸಿನಿಮಾದಲ್ಲಿ ಉಪೇಂದ್ರ ಅವರ ಜೊತೆ ನಟಿಸಿದ್ದು ಹೆಚ್ಚಿನ ಖುಷಿ ತಂದಿದೆ. ಚಿತ್ರತಂಡದ ಪರಿಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಾನು ಜರ್ನಲಿಸ್ಟ್ ಪಾತ್ರ ನಿರ್ವಹಣೆ ಮಾಡಿದ್ದೇನೆ’ ಎಂದು ಹೇಳಿದ್ದಾರೆ
ಕರ್ನಾಟಕದಲ್ಲಿ ಸುಮಾರು 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಹೋಮ್ ಮಿನಿಸ್ಟರ್’ ಚಿತ್ರ ಬಿಡುಗಡೆ ಆಗುತ್ತಿದೆ. ಚಿತ್ರವನ್ನು ಶ್ರೇಯಾ ಚಿತ್ರ ಮೂಲಕ ಬೆಂಗಳೂರು ಕುಮಾರ್ ಫಿಲಂಸ್ ಸಂಸ್ಥೆ ಬಿಡುಗಡೆ ಮಾಡುತ್ತಿದೆ. ಸುಜಯ್ ಕೆ. ಶ್ರೀಹರಿ ನಿರ್ದೇಶನದ ಈ ಚಿತ್ರಕ್ಕೆ ಕುಂಟುನಿ ಎಸ್. ಕುಮಾರ್ ಛಾಯಾಗ್ರಹಣ ಇದೆ. ಸಂಭಾಷಣೆಯನ್ನು ಧರ್ಮೇಂದ್ರ ಬರೆದಿದ್ದಾರೆ.
ತಾರಾಬಳಗದಲ್ಲಿ ಚಾಂದಿನಿ, ಬೇಬಿ ಆದ್ಯಾ, ಸುಮನ್ ರಂಗನಾಥ್, ಸಾಧುಕೋಕಿಲ, ಶ್ರೀನಿವಾಸ ಮೂರ್ತಿ, ಸುಧಾ ಬೆಳವಾಡಿ, ತಿಲಕ್, ಅವಿನಾಶ್, ಮಾಳವಿಕಾ ಅವಿನಾಶ್, ಲಾಸ್ಯಾ ಮುಂತಾದವರಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!