ಗ್ರಾಮೀಣ ಪರಿಸರದಲ್ಲಿ ನಡೆಯುವ ತ್ರೀಕೋನ ಪ್ರೇಮ ಕಥಾನಕ ಹೊಂದಿರುವ ಚಿತ್ರ ಪ್ರಸ್ತ. ಯುವ ಪ್ರತಿಭೆ ರವಿ ಶತಭಿಷ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣದ ಜೊತೆಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದ ಸಹಾಸ ನಿರ್ದೇಶನ ಮತ್ತು ಸಂಕಲನವನ್ನು ಕೂಡ ಮಾಡಿರುವ ರವಿ ಶತಭಿಷ ಅವರು ಪ್ರಸ್ತ ಚಿತ್ರದ ಏಳು ಜವಾಬ್ದಾರಿಗಳನ್ನು ತನ್ನ ಹೆಗಲಿಗೆ ಹಾಕಿಕೊಂಡು ನಿಭಾಯಿಸಿದ್ದಾರೆ. ಮಂಡ್ಯ, ಪಾಂಡವ ಪುರ, ಶ್ರೀರಂಗ ಪಟ್ಟಣ ಹಾಗೂ ಬೆಂಗಳೂರು ಸುತ್ತ ಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಕೂಡ ಮುಗಿದ್ದಿದ್ದು ನವೆಂಬರ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಸಿದ್ದತೆ ನಡೆದಿದೆ. ಹಳ್ಳಿಯ ಪರಿಸರದಲ್ಲೇ ಬೆಳೆದ ನಾಯಕನಿಗೆ ಪ್ರೀತಿ ಪ್ರೇಮದ ಬಗ್ಗೆ ಬೆಲೆ ಗೊತ್ತಿರುವುದಿಲ್ಲ. ತನಗೆ ಗೊತ್ತಿಲ್ಲದೆ ಇಬ್ಬರು ಯುವತಿಯರನ್ನು ಲವ್ ಮಾಡುವ ನಾಯಕ ಕೊನೆಗೆ ಯಾರ ಪ್ರೀತಿ ಉಳಿಸಿಕೋಳ್ಳುತ್ತಾನೆ ಎನ್ನುವುದೇ ಪ್ರಸ್ತ ಚಿತ್ರದ ಕಥಾ ಹಂದರವಾಗಿದೆ.
ಅಭಿಜ್ಞಾ ಕ್ರೀಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಮೋಹನ್ ಎಂ.ಎಸ್.ಎಸ್., ಸಂಗಮೇಶ್ ಛಾಯಗ್ರಹಣ, ಅಸನೆಲ್ ಸಂಗೀತ, ನಿತೀಶ್ ಹಿನ್ನೆಲೆ ಸಂಗೀತ, ಶಿವರಾಜಗುಬ್ಬಿ, ಮೋಹನ್, ಛಾಯಾಂಕ್ ಸಾಹಿತ್ಯ, ಹರೀಶ್ ನೃತ್ಯ ನಿರ್ದೇಶನವಿದೆ. ವಿಶ್, ವರ್ಷ, ಯಾದ್ವಿಕ್, ಸುಧಾಕರ ಕಾಳೇನಹಳ್ಳಿ, ಚಂದ್ರು, ಮಂಜುಳ, ಕಿಶೋರ್, ದೇವೇಗೌಡ, ಲೋಕೇಶ, ಕಾಳೇಗೌಡ, ಮಧು ಚೆಲುವರಾಜ್ ಮುಂತಾದವರ ತಾರಾಬಳಗವಿದೆ.
Be the first to comment