ರಾಕಿಂಗ್ ಸ್ಟಾರ್ ಯಶ್ ನಟನೆಯ ಆಕ್ಷನ್ ಚಿತ್ರ “ಟಾಕ್ಸಿಕ್” ನ ಸೆಟ್ಗಳಿಂದ ಶರ್ಟ್ ಲೆಸ್ ಆಗಿ ಕಾಣಿಸಿಕೊಂಡಿರುವ ಯಶ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿದೆ.
ಯಶ್ ಅವರ ವೀಡಿಯೊ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಯಶ್ ಧೂಮಪಾನ ಮಾಡುತ್ತಿರುವುದನ್ನು ಕಾಣಬಹುದು. ಮುಂದಿನ ವರ್ಷದ ಮಾರ್ಚ್ 19ರಂದು “ಟಾಕ್ಸಿಕ್” ಚಿತ್ರ ಬಿಡುಗಡೆಗೂ ಮುನ್ನ ಯಶ್ ಅವರ ವೀಡಿಯೊ ಆನ್ಲೈನ್ನಲ್ಲಿ ಸೋರಿಕೆಯಾಗಿದ್ದು, ಚಿತ್ರದ ರಹಸ್ಯ ಲೀಕ್ ಆಗುವ ಮೂಲಕ ಕಳವಳ ಉಂಟಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಯಶ್ ಬಾಲ್ಕನಿಯಲ್ಲಿ ಸಿಗರೇಟ್ ಸೇದುತ್ತಿದ್ದಾರೆ. ಯಶ್ ನೀಲಿ ಜೀನ್ಸ್ ಧರಿಸಿ, ಶರ್ಟ್ಲೆಸ್ ಆಗಿ ಗಡ್ಡದ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಲೀಕ್ ಆಗಿರುವ ವಿಡಿಯೋ ಬಗ್ಗೆ ಅಭಿಮಾನಿಗಳು “ಸುನಾಮಿ ಗ್ಯಾರಂಟಿ” ಎಂದು ಹೇಳಿ ಹೃದಯ ಮತ್ತು ಬೆಂಕಿಯ ಎಮೋಜಿ ಕಾಮೆಂಟ್ಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಎಮೋಜಿಗಳೊಂದಿಗೆ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ.
ಟಾಕ್ಸಿಕ್ ಚಿತ್ರ ಗ್ಯಾಂಗ್ ಸ್ಟರ್ ಕಥಾಹಂದರವನ್ನು ಹೊಂದಿದೆ. ಚಿತ್ರವನ್ನು ಗೀತು ಮೋಹನ್ದಾಸ್ ನಿರ್ದೇಶಿಸಿದ್ದಾರೆ. ಗೋವಾದಲ್ಲಿ ನಡೆಯುವ ಚಿತ್ರದ ಕಥೆ ಡ್ರಗ್ ಮಾಫಿಯಾ, ಅಧಿಕಾರ, ಪ್ರೀತಿ ಮತ್ತು ದ್ರೋಹದ ಪ್ರಪಂಚದ ಸುತ್ತ ಸುತ್ತುತ್ತದೆ.
ವರದಿಗಳ ಪ್ರಕಾರ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ಅಕ್ಷಯ್ ಒಬೆರಾಯ್ ಮತ್ತು ಸುದೇವ್ ನಾಯರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರವನ್ನು ಯಶ್, ವೆಂಕಟ್ ಕೆ. ನಾರಾಯಣ್ ಅವರು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಟಾಕ್ಸಿಕ್ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.





Be the first to comment