ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.
ಟೀಸರ್ ಇಂದು ಬೆಳಗ್ಗೆ 9:35ಕ್ಕೆ ಬಿಡುಗಡೆಯಾಗಿದ್ದು, ಅಭಿಮಾನಿಗಳ ಭಾರೀ ಪ್ರತಿಕ್ರಿಯೆ ಗಳಿಸಿದೆ. ರೆಟ್ರೋ ಶೈಲಿಯಲ್ಲಿ ವಿನ್ಯಾಸಗೊಳಿಸಲಾದ ಟೀಸರ್ ದೃಶ್ಯ ವೈಭವ, ಹಿನ್ನೆಲೆ ಸಂಗೀತ ಮತ್ತು ಹಾಲಿವುಡ್ ಮಟ್ಟದ ತಾಂತ್ರಿಕ ಗುಣಮಟ್ಟದಿಂದ ಗಮನ ಸೆಳೆಯುತ್ತದೆ.
ಟೀಸರ್ನಲ್ಲಿ ಯಶ್ ಯಂಗ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ರಾಯನ ಮಗ ಇರಬಹುದೇ ಎಂಬ ಪ್ರಶ್ನೆ ಮೂಡಿದೆ. ಅವರು ಸಖತ್ ವೈಲೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಸರ್ನಲ್ಲಿ ರಕ್ತಪಾತವಿದೆ.
ಟೀಸರ್ “ಈ ಯುದ್ಧ ವಿಭಿನ್ನವಾಗಿರಲಿದೆ” ಎಂಬ ಧ್ವನಿಯಿಂದ ಆರಂಭವಾಗುತ್ತದೆ. ರಾಯಲ್ ಸರ್ಕಸ್ ನಡೆಯುತ್ತಿರುವ ಕೆಲವು ವೇಗದ ದೃಶ್ಯಗಳನ್ನು, ರಾಯ ಪಾತ್ರದಲ್ಲಿ ನಟಿಸಿರುವ ಯಶ್ ಅವರ ಅತ್ಯಂತ ಸಮೀಪದ ದೃಶ್ಯಗಳೊಂದಿಗೆ ಹೊಂದಿಸಲಾಗಿದೆ. ವಾಯ್ಸ್‌ಓವರ್‌ನಲ್ಲಿ “ನೀನು ಜಗತ್ತಿನ ವಿರುದ್ಧ ಹೋಗಿ ಬದುಕಲು ಸಾಧ್ಯವಿಲ್ಲ. ಶರಣಾಗು, ರಾಯಾ” ಎಂದು ಹೇಳಲಾಗುತ್ತದೆ.
ನಂತರ ಯಶ್ ಬಾತ್‌ಟಬ್‌ನಿಂದ ಎದ್ದು ಭವ್ಯವಾಗಿ ಕಾಣಿಸಿಕೊಂಡು, ಒಬ್ಬನ ತಲೆಗೆ ಕ್ರೂರವಾಗಿ ಹೊಡೆಯುತ್ತಿರುವುದು ಕಾಣಿಸುತ್ತದೆ. “ನಾನು ಹೇಳಿದಾಗಲೇ ಇದು ಮುಗಿಯುತ್ತದೆ” ಎಂದು ಹೇಳುತ್ತಾರೆ. ಗುಂಡಿನ ಸದ್ದುಗಳು, ಜನರು ಗಾಯಗೊಳ್ಳುವ ದೃಶ್ಯ, ಗುಂಡಾಗಳನ್ನು ಹೊಡೆದುರುಳಿಸುವ ಕ್ಷಣಗಳು ಕಾಣಿಸುತ್ತವೆ.
‘ಟಾಕ್ಸಿಕ್’ ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದು, ಮಾರ್ಚ್ 19ರಂದು ತೆರೆಗೆ ಬರಲು ಸಿದ್ಧವಾಗಿದೆ. KVN ಪ್ರೊಡಕ್ಷನ್ಸ್ ಸಂಸ್ಥೆ ಟಾಕ್ಸಿಕ್ ಚಿತ್ರವನ್ನು ನಿರ್ಮಿಸಿದೆ.
—-





Be the first to comment