ಯಶ್ ಬರ್ತ್‌ಡೇಗೆ ‘ಟಾಕ್ಸಿಕ್’ ಟೀಸರ್ ರಿಲೀಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಟೀಸರ್ ಯಶ್ ಬರ್ತ್‌ಡೇಗೆ ಬಿಡುಗಡೆಯಾಗಿದೆ.

ಕೆಜಿಎಫ್ 2 ಚಿತ್ರದ ಬಳಿಕ ಟಾಕ್ಸಿಕ್ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದ ಯಶ್ ತಮ್ಮ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.  ಜನವರಿ 7ರಂದು ಟೀಸರ್ ರಿಲೀಸ್ ಮಾಡುವುದಾಗಿ ಘೋಷಿಸಿದ್ದ ತಂಡ  ಯಶ್ ಬರ್ತ್‌ಡೇ ದಿನವೇ ಟೀಸರ್ ಬಿಡುಗಡೆ ಮಾಡಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ಟೀಸರ್‌ನಲ್ಲಿ ಯಶ್  ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಲಯಾಳಂನ ಖ್ಯಾತ ನಟಿ ಹಾಗೂ ನಿರ್ದೇಶಕಿ ಗೀತು ಮೋಹನ್ದಾಸ್ ತಮ್ಮ ಸಿನಿಮಾಗಳಲ್ಲಿ ಪಾತ್ರಗಳನ್ನು ವಿಭಿನ್ನವಾಗಿ ಪ್ರೆಸೆಂಟ್ ಮಾಡಿದ ಶೈಲಿಯಲ್ಲೇ,  ಯಶ್‌ನ್ನೂ ಹೊಸ ಆಯಾಮದಲ್ಲಿ ತೋರಿಸಿದ್ದಾರೆ.

ಟೀಸರ್ ಸ್ಮಶಾನದ ದೃಶ್ಯಗಳಿಂದ ಶುರುವಾಗುತ್ತದೆ.  ಶರ್ಟ್‌ಲೆಸ್ ಆಗಿ ಕಾಣಿಸುವ ಯಶ್ ಬೂಟುಗಾಲಿಂದ ಬುಲೆಟ್ಸ್ ಹೊರಬಿಡುವ ದೃಶ್ಯ ಮೈನವಿರೇಳಿಸುವಂತಿದೆ.

ಟಾಕ್ಸಿಕ್  ಮಾರ್ಚ್ 19ರಂದು ವಿಶ್ವದಾದ್ಯಂತ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ.  ‘ಟಾಕ್ಸಿಕ್’ ಸಿನಿಮಾ ‘ಧುರಂಧರ್ 2’ ವಿರುದ್ಧ ತೆರೆಗೆ ಬರಲಿದೆ. ಹಿಂದಿಯಲ್ಲಿ ‘ಧುರಂಧರ್’ ಸೂಪರ್ ಹಿಟ್ ಆಗಿದ್ದು, ಅದರ ಸೀಕ್ವೆಲ್    ನಿರೀಕ್ಷೆ ಹುಟ್ಟುಹಾಕಿದೆ. ಈ ಸ್ಪರ್ಧೆಯನ್ನು ಎದುರಿಸಲು ‘ಟಾಕ್ಸಿಕ್’ ತಂಡ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!