ಟಾಕ್ಸಿಕ್ ಸಿನಿಮಾದ ಪ್ರಮುಖ ದೃಶ್ಯ ವೊಂದು ಸೋರಿಕೆಯಾಗಿದ್ದು ಚಿತ್ರತಂಡಕ್ಕೆ ತಲೆಬಿಸಿ ಶುರುವಾಗಿದೆ.
ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾವನ್ನು ಚಿತ್ರತಂಡ ಸಾಕಷ್ಟು ಮುತುವರ್ಜಿ ವಹಿಸಿ ಶೂಟ್ ಮಾಡುತ್ತಿದೆ. ಆದರೆ ಈಗ ಚಿತ್ರದ ಪ್ರಮುಖ ದೃಶ್ಯ ಲೀಕ್ ಚಿತ್ರತಂಡಕ್ಕೆ ತಲೆಬಿಸಿ ತಂದಿದೆ.
ಯಶ್ ಅವರು ಯಾವುದೋ ಪ್ರಮುಖ ವ್ಯಕ್ತಿಯನ್ನು ಮೀಟ್ ಮಾಡುತ್ತಿರುವ ದೃಶ್ಯ ಇದಾಗಿದೆ. ಸಿನಿಮಾದ ಅದ್ದೂರಿ ಸೆಟ್ ಗಮನ ಸೆಳೆದಿದೆ. ಯಶ್ ಅವರ ಗೆಟಪ್ ಕೂಡ ಗಮನ ಸೆಳೆದಿದೆ. ಈ ದೃಶ್ಯವನ್ನು ಸೆರೆ ಹಿಡಿದಿದ್ದು ಸೆಟ್ನಲ್ಲಿ ಇದ್ದವರು ಎನ್ನಲಾಗಿದೆ.
ಈಗಾಗಲೇ ಹಲವು ಸಿನಿಮಾ ಸೆಟ್ಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಸಿನಿಮಾದ ಸೆಟ್ ಹಾಗೂ ದೃಶ್ಯಗಳು ಲೀಕ್ ಆಗಬಾರದು ಎನ್ನುವ ಕಾರಣಕ್ಕೆ ಈ ರೀತಿಯ ಕಠಿಣ ನಿಯಮ ತಂದ ಉದಾಹರಣೆ ಇದೆ.
ಮಲಯಾಳಂನ ಗೀತು ಮೋಹನ್ದಾಸ್ ಅವರು ಟಾಕ್ಸಿಕ್’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದ್ದೂರಿ ಸೆಟ್ಗಳನ್ನು ಹಾಕಿ ಸಿನಿಮಾ ಶೂಟಿಂಗ್ ಮಾಡಲಾಗುತ್ತಿದೆ. ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆ.
Be the first to comment