‘ಟಾಕ್ಸಿಕ್’ ಬಿಡುಗಡೆ ತಡ

ಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ತಡವಾಗುತ್ತದೆ ಎಂದು ಯಶ್ ಹೇಳಿದ್ದಾರೆ.

‘ಟಾಕ್ಸಿಕ್’ ಸಿನಿಮಾ 2025ರ ಏಪ್ರಿಲ್ 10ರಂದು ಬಿಡುಗಡೆ ಆಗಲಿದೆ ಎಂದು ಘೋಷಿಸಲಾಗಿತ್ತು. ಈಗ ಆಗಿರೋದು ಕೇವಲ 1 ತಿಂಗಳ ಶೂಟ್ ಮಾತ್ರ. ಹೀಗಾಗಿ ಸಿನಿಮಾ  ಘೋಷಿಸಿದ ದಿನಾಂಕದಂದು  ಬಿಡುಗಡೆ ಆಗುವುದಿಲ್ಲ.

‘ನಾವು ಸ್ವಲ್ಪ ಮುಂಚಿತವಾಗಿ ಸಿನಿಮಾ ಶೂಟ್ ಪ್ರಾರಂಭಿಸಬೇಕಾಗಿತ್ತು. ಆದರೆ ಅಂದುಕೊಂಡಂತೆ ನಡೆಯಲಿಲ್ಲ. ಡೇಟ್​ ಪ್ರಾಬ್ಲಂ ಆಯಿತು. ಇದು ನಿರೀಕ್ಷೆಗಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡಿತು. ಅಂದುಕೊಂಡ ದಿನಾಂಕದಂದು ನಾವು ಬರಲು ಸಾಧ್ಯವಿಲ್ಲ’ ಎಂದು ಯಶ್ ಹೇಳಿದ್ದಾರೆ.

ಬಿಗ್ ಬಜೆಟ್ ಚಿತ್ರಗಳಲ್ಲಿ ಅಂದುಕೊಂಡ ದಿನಾಂಕದಂದು ಸಿನಿಮಾ ರಿಲೀಸ್   ಸಾಧ್ಯವಾಗುವುದೇ ಇಲ್ಲ. ಸಿನಿಮಾ ರಿಲೀಸ್​ ನ್ನು ಮುಂದಕ್ಕೆ ಹಾಕಿದ ಬಳಿಕವೇ ಅದು ರಿಲೀಸ್ ಆಗುತ್ತದೆ. ‘ಪುಷ್ಪ 2’, ‘ಕಲ್ಕಿ 2898 ಎಡಿ’ ಸೇರಿ ಅನೇಕ ಚಿತ್ರ  ಈ ಸಾಲಿನಲ್ಲಿ ಇವೆ. ಈಗ ಈ ಸಾಲಿಗೆ ‘ಟಾಕ್ಸಿಕ್’  ಸೇರ್ಪಡೆ ಆಗುತ್ತಿದೆ.

‘ನಾವು ದಿನಾಂಕ ಘೋಷಿಸಿ ಅಂದು ರಿಲೀಸ್ ಮಾಡಲು ಸಾಧ್ಯವಾಗಿಲ್ಲ ಎಂಬುದು ಹಿಂದೆಂದೂ ಸಂಭವಿಸಿಲ್ಲ. ಇದೇ ಮೊದಲ ಸಲ ಸಿನಿಮಾ  ಘೋಷಿಸಿದ ದಿನಾಂಕದಂದು  ಬಿಡುಗಡೆ ಆಗುವುದಿಲ್ಲ. ಈ ಚಿತ್ರದಲ್ಲಿ ಎಲ್ಲರನ್ನೂ ಒಟ್ಟಿಗೆ ಸೇರಿಸುವುದು ಸ್ವಲ್ಪ ಕಷ್ಟ’ ಎಂದಿದ್ದಾರೆ ಯಶ್.

‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದ ‘ಕೆವಿಎನ್’ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!