‘ಟಾಕ್ಸಿಕ್’ ಬಿಡುಗಡೆ ದಿನಾಂಕ ಫಿಕ್ಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’  ಚಿತ್ರ 2026ರ ಮಾರ್ಚ್ 19 ರಂದು ಬಿಡುಗಡೆ ಆಗಲಿದೆ.

ಟಾಕ್ಸಿಕ್’  ಚಿತ್ರ ಬಗ್ಗೆ ಕಳೆದ ಎರಡು ದಿನಗಳಿಂದ ಹಲವು ವದಂತಿಗಳು ಹರಿದಾಡುತ್ತಿವೆ. ಚಿತ್ರ ರಿಲೀಸ್‌ ಮುಂದೂಡಲಾಗಿದೆ. ಯಶ್ ಹಾಗೂ ನಿರ್ದೇಶಕಿ ಗೀತು ಮೋಹನದಾಸ್ ನಡುವೆ ಅಸಮಾಧಾನ ಉಂಟಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ಗಾಳಿ ಸುದ್ದಿಗೆ ಚಿತ್ರ ನಿರ್ಮಾಣ ಸಂಸ್ಥೆ ಸ್ಪಷ್ಟನೆ ನೀಡಿದೆ.

ಕೆವಿಎನ್ ಪ್ರೊಡಕ್ಷನ್‌ ತಂಡ “ಯಾವುದೇ ತೊಂದರೆ ಇಲ್ಲ. ಸಿನಿಮಾ ತಡವಾಗಿಲ್ಲ.  ರಿಲೀಸ್ ದಿನಾಂಕ 2026ರ ಮಾರ್ಚ್ 19 ರಂದು ಆಗಿದೆ” ಎಂದು ತಿಳಿಸಿದೆ.

ಬಾಲಿವುಡ್ ವಿಶ್ಲೇಷಕ ತರಣ್ ಆದರ್ಶ್ ಕೂಡ ಈ ವಿಷಯವನ್ನು ತಮ್ಮ ಎಕ್ಸ್  ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  “ವದಂತಿಗಳನ್ನು ನಂಬಬೇಡಿ. ‘ಟಾಕ್ಸಿಕ್’ ಚಿತ್ರ ಯೋಜನೆಯಂತೆ ಸಾಗುತ್ತಿದೆ. ರಿಲೀಸ್ ಡೇಟ್  ಬದಲಾಗಿಲ್ಲ” ಎಂದು ತಿಳಿಸಿದ್ದಾರೆ.

‘ಟಾಕ್ಸಿಕ್’ ಚಿತ್ರದ ರಿಲೀಸ್ ಮುಂದೂಡಿಕೆಯ ಬಗ್ಗೆ ಹರಿದ ವದಂತಿಗಳು ಸಂಪೂರ್ಣ ಸುಳ್ಳು ಎಂದು ಕೆವಿಎನ್ ಪ್ರೊಡಕ್ಷನ್‌ ತಂಡ ತಿಳಿಸಿದೆ. ಟಾಕ್ಸಿಕ್’ ನಿಗದಿಯಂತೆಯೇ 2026ರ ಮಾರ್ಚ್ 19ರಂದು ತೆರೆಗೆ ಬರುತ್ತಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!