ರೆಬೆಕಾ ಪಾತ್ರ ಪರಿಚಯಿಸಿದ ಟಾಕ್ಸಿಕ್ ಚಿತ್ರತಂಡ

ಯಶ್ ಅಭಿನಯದ ಟಾಕ್ಸಿಕ್ ಚಿತ್ರತಂಡ  ‘ರೆಬೆಕಾ’ ಪಾತ್ರವನ್ನು  ಪರಿಚಯಿಸಿದೆ.

ಈ ಪಾತ್ರದಲ್ಲಿ ಬಾಲಿವುಡ್ ನಟಿ ತಾರಾ ಸುತಾರಿಯಾ ಅಭಿನಯಿಸುತ್ತಿರುವುದು ಬಹಿರಂಗವಾಗಿದೆ. ರೆಬೆಕಾ ಪಾತ್ರದ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

ಟಾಕ್ಸಿಕ್  ಮಾರ್ಚ್ 19ರಂದು ವಿಶ್ವದಾದ್ಯಂತ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ. ಅದರ ಭಾಗವಾಗಿ ಪ್ರಮುಖ ಪಾತ್ರಗಳ ಫಸ್ಟ್‌ಲುಕ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಚಿತ್ರತಂಡ ಕಿಯಾರಾ ಅಡ್ವಾನಿ ಅಭಿನಯದ ‘ನಡಿಯಾ’, ಹುಮಾ ಖುರೇಷಿ ಅವರ ‘ಎಲೆಜೆಬೆತ್’ ಹಾಗೂ ನಯನತಾರಾ ಅವರ ‘ಗಂಗಾ’ ಪಾತ್ರಗಳ ಬಗ್ಗೆ  ಹಿಂಟ್ ನೀಡಿ, ಫಸ್ಟ್‌ಲುಕ್ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿತ್ತು. ಈ ಪೋಸ್ಟರ್‌ಗಳು ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿವೆ.

ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ   ಮೂಡಿ ಬರುತ್ತಿರುವ ಟಾಕ್ಸಿಕ್ ಸಿನಿಮಾಗೆ ಭಾರೀ ನಿರೀಕ್ಷೆ ನಿರ್ಮಾಣವಾಗಿದೆ. ವಿಶ್ವದಾದ್ಯಂತ ಅದ್ಧೂರಿ ರಿಲೀಸ್‌ಗೆ ಚಿತ್ರತಂಡ ತಯಾರಿ ನಡೆಸುತ್ತಿದೆ.  ಮುಂದಿನ ದಿನಗಳಲ್ಲಿ ಇನ್ನಷ್ಟು ಅಪ್ಡೇಟ್‌ಗಳು ಹೊರಬೀಳುವ ಸಾಧ್ಯತೆ ಇದೆ.

ಯಶ್ ಹುಟ್ಟುಹಬ್ಬದ ಸಂದರ್ಭ ಚಿತ್ರತಂಡದಿಂದ ಯಾವ ವಿಶೇಷ ಗಿಫ್ಟ್ ಘೋಷಣೆಯಾಗಲಿದೆ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!