‘ವಾರಣಾಸಿ’ಗಿಂತ ಮೂರು ಪಟ್ಟು ವೀವ್ಸ್ ಪಡೆದ ‘ಟಾಕ್ಸಿಕ್’ ಟೀಸರ್

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ರಾಜಮೌಳಿಯ ‘ವಾರಣಾಸಿ’ಗಿಂತ ಮೂರು ಪಟ್ಟು ಹೆಚ್ಚು ವೀವ್ಸ್ ಪಡೆದು ದಾಖಲೆ ನಿರ್ಮಿಸಿದೆ.

‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆಯಾಗಿ ಐದೇ ದಿನಕ್ಕೆ 8.5 ಕೋಟಿ ವೀಕ್ಷಣೆ  ಪಡೆದುಕೊಂಡಿದೆ. ಯಶ್ ಜನಪ್ರಿಯತೆ ಮತ್ತು ಟೀಸರ್‌ನ ಆಕರ್ಷಣೆ ಭಾರಿ ಯಶಸ್ಸು ತಂದುಕೊಟ್ಟಿದೆ. ಹಸಿಬಿಸಿ ದೃಶ್ಯ  ಟೀಸರ್​​ನಲ್ಲಿ ಇದ್ದು, ಈ ಕಾರಣದಿಂದ ಜನರು ಮುಗಿಬಿದ್ದು ‘ಟಾಕ್ಸಿಕ್’ ಟೀಸರ್ ವೀಕ್ಷಿಸಿದ್ದಾರೆ.

ವಾರಣಾಸಿ’ ಟೀಸರ್ ರಿಲೀಸ್ ಮಾಡಲು ರಾಜಮೌಳಿ ದೊಡ್ಡ ಪ್ಲ್ಯಾನ್ ಮಾಡಿದ್ದರು.  ಟೀಸರ್ ಲಾಂಚ್ ಮಾಡಲು ರಾಮೋಜಿ ಫಿಲ್ಮ್ ಸಿಟಿಯಲ್ಲಿ ದೊಡ್ಡ ಈವೆಂಟ್ ಮಾಡಲಾಯಿತು. ಈ ಈವೆಂಟ್​ಗಾಗಿ ಕೋಟಿ   ಹಣವನ್ನು ಖರ್ಚು ಮಾಡಲಾಯಿತು. ಟೀಸರ್ ರಿಲೀಸ್ ಆಗಿ ಕೆಲವು ತಿಂಗಳು ಕಳೆದಿದ್ದು, ಇದು ವೀಕ್ಷಣೆ ಕಂಡಿದ್ದು  2.5ಕೋಟಿ ಮಾತ್ರ.

‘ಟಾಕ್ಸಿಕ್’ ಚಿತ್ರಕ್ಕೆ ಯಶ್ ಹೀರೋ, ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್ ಸೇರಿ ಐವರು ನಾಯಕಿಯರು ಇದ್ದಾರೆ. ಗೀತು ಮೋಹನ್​ ದಾಸ್  ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ಧುರಂಧರ್ 2’   ಹಾಗೂ ‘ಟಾಕ್ಸಿಕ್’  ಮಾರ್ಚ್ 19ರಂದು ರಿಲೀಸ್ ಆಗುತ್ತಿವೆ.  ‘ಟಾಕ್ಸಿಕ್’  ಟೀಸರ್ ವೀವ್ಸ್ ನೋಡಿದರೆ ಚಿತ್ರ  ಅದ್ಭುತ ಯಶಸ್ಸು ಪಡೆಯುವ  ಲಕ್ಷಣ ಕಾಣಿಸುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!