Jaggesh: ಈ ವಾರ ತೋತಾಪುರಿ2 ತೆರೆಗೆ

ನವರಸ ನಾಯಕ ಜಗ್ಗೇಶ್ ಅಭಿನಯಿಸಿದ ತೋತಾಪುರಿ2 ಚಿತ್ರ ಈ ವಾರ ತೆರೆಗೆ ಬರಲಿದೆ.

ನೀರ್‍ದೋಸೆ ಖ್ಯಾತಿಯ ವಿಜಯಪ್ರಸಾದ್ ತೋತಾಪುರಿ ಚಿತ್ರದ ಗೆಲುವು ಬಳಿಕ ತೋತಾಪುರಿ2 ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ತೋತಾಪುರಿ ಮೊದಲ ಭಾಗದಲ್ಲಿ ಜಗ್ಗೇಶ್ ತನ್ನ ಸಹಜ ಅಭಿನಯದಿಂದ ಎಲ್ಲರನ್ನು ರಂಜಿಸಿದ್ದರು.

ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ವಿಜಯಪ್ರಸಾದ್ ತೋತಾಪುರಿ-2ರ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಗೋವಿಂದಾಯ ನಮಃ, ಶಿವಲಿಂಗದಂಥ ಯಶಸ್ವೀ ಚಿತ್ರಗಳನ್ನು ನಿರ್ಮಿಸಿದ್ದ ಕೆ.ಸುರೇಶ್ ಅವರು ಚಿತ್ರದ ನಿರ್ಮಾಪಕ ಆಗಿದ್ದಾರೆ.

ಜಗ್ಗೇಶ್, ಅದಿತಿ ಪ್ರಭುದೇವ ಅಭಿನಯವನ್ನು ಭಾಗ ಎರಡರಲ್ಲೂ ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಡಾಲಿ ಧನಂಜಯ್ ಕೂಡ ಎರಡನೇ ಭಾಗದಲ್ಲಿ ನವರಸ ನಾಯಕ ಜಗ್ಗೇಶ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ.

ಚಿತ್ರಕ್ಕೆ ನಿರಂಜನ ಬಾಬು ಅವರ ಛಸಯಾಗ್ರಹಣ, ಅರುಣ್ ಆಂಡ್ರ್ಯೂ ಅವರ ಸಂಗೀತ ಸಂಯೋಜನೆಯಿದೆ. ಚಿತ್ರದಲ್ಲಿ ದತ್ತಣ್ಣ, ಸುಮನ ರಂಗನಾಥ್, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಮೊದಲ ಭಾಗದಲ್ಲಿದ್ದ ಬಹುತೇಕ ನಟರು ನಟಿಸಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!