ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅಭಿನಯದ ” ತೋತಾಪುರಿ 2″ ಚಿತ್ರದ ಡಬ್ಬಿಂಗ್ ಕೆಲಸ ಆರಂಭವಾಗಿದೆ.
ಜಗ್ಗೇಶ್-ವಿಜಯ್ ಪ್ರಸಾದ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರೋ ತೋತಾಪುರಿ 2 ಚಿತ್ರದ ಡಬ್ಬಿಂಗ್ ಕೆಲಸ ಜುಲೈ 12ರಿಂದ ಪ್ರಾರಂಭವಾಗಿದೆ ಎಂದು ನಾಯಕ ನಟ ಜಗ್ಗೇಶ್ ತಿಳಿಸಿದ್ದಾರೆ.
ಜಗ್ಗೇಶ್ ಅವರ ಜೊತೆಗೆ ನಾಯಕ ನಟಿಯಾಗಿ ಅದಿತಿ ಪ್ರಭುದೇವ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಏಕಕಾಲಕ್ಕೆ ಎರಡು ಭಾಗಗಳಾಗಿ ಚಿತ್ರೀಕರಿಸಲಾಗಿದೆ.
“ಆದಷ್ಟು ಶೀಘ್ರ ನಗೆಯ ರಸದೌತಣ ನೀಡಲು ಪ್ರೇಕ್ಷಕರ ಮುಂದೆ ಬರುತ್ತೇವೆ ” ಎಂದು ಜಗ್ಗೇಶ್ ತಿಳಿಸಿದ್ದಾರೆ.
ವಿಜಯ ಪ್ರಸಾದ್ ನಿರ್ದೇಶನ, ಜಗ್ಗೇಶ್ ಅಭಿನಯದ ” ನೀರ್ ದೋಸೆ” ಸೂಪರ್ ಹಿಟ್ ಆಗಿತ್ತು. ಈ ಹಿನ್ನೆಲೆಯಲ್ಲಿ ತೋತಾಪುರಿ ಚಿತ್ರ ಚಿತ್ರಪ್ರೇಮಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನು ಉಂಟು ಮಾಡಿದೆ.
ತೋತಾಪುರಿ ಚಿತ್ರದಲ್ಲಿ ಜಗ್ಗೇಶ್ ಅವರು ರೈತನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಿತಿ ಪ್ರಭುದೇವ ಅಲ್ಲದೇ ಸುಮನ್ ರಂಗನಾಥ್ ಕೂಡಾ ಪ್ರಮುಖ ಪಾತ್ರದಲ್ಲಿ ಇದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.
ಕರೋನ ಎರಡನೇ ಅಲೆ ಬಳಿಕ ಕನ್ನಡ ಚಿತ್ರರಂಗದ ಚಟುವಟಿಕೆ ಗರಿಗೆದರಿದೆ. ದೊಡ್ಡ ಬ್ಯಾನರ್ ಗಳು ಹಿರಿಯ ನಾಯಕರ ಚಿತ್ರ ಘೋಷಣೆ ಮಾಡುತ್ತಿದ್ದು ಚಿತ್ರ ಪ್ರೇಮಿಗಳಿಗೆ ಮುಂದಿನ ದಿನಗಳಲ್ಲಿ ರಸದೌತಣ ಸಿಗಲಿದೆ.
________

Be the first to comment