ಸೆ.30ಕ್ಕೆ ತೋತಾಪುರಿ ರಿಲೀಸ್

ನವರಸ ನಾಯಕ ಜಗ್ಗೇಶ್ ನಟನೆಯ ತೋತಾಪುರಿ ಸಿನಿಮಾ ಸೆಪ್ಟಂಬರ್ 30 ರಂದು ರಿಲೀಸ್ ಆಗಲು ರೆಡಿಯಾಗಿದೆ.

ನವರಸನಾಯಕ ಜಗ್ಗೇಶ್ ಅಭಿನಯ ಹಾಗೂ ನೀರ್​​ದೋಸೆ ಸಿನಿಮಾ‌ ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಈ ವರ್ಷದ ಬಹುನಿರೀಕ್ಷಿತ ಚಿತ್ರ ತೋತಾಪುರಿ ಆಗಿದೆ.

ಈ ಚಿತ್ರದಲ್ಲಿ ಎರಡು ಶೇಡ್​ನಲ್ಲಿ ಜಗ್ಗೇಶಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮಾಡೋದಿಕ್ಕೆ ಮೊದಲಿಗೆ ನಿರ್ಮಾಪಕ ಕೆ ಸುರೇಶ್​ಗೆ ಇರುವ ತಾಳ್ಮೆ ಮುಖ್ಯ ಕಾರಣ. ಯಾಕೆಂದರೆ ದೊಡ್ಡ ತಾರ ಬಳಗ, ಜೊತೆಗೆ ಎರಡು ವರ್ಷ ಕೊರೊನಾ ಎಂಬ ಹೆಮ್ಮಾರಿಯಿಂದ ತಪ್ಪಿಸಿಕೊಂಡು ಈ ಸಿನಿಮಾ ಮಾಡಲಾಗಿದೆ. ನಿರ್ಮಾಪಕರ ತಾಳ್ಮೆ ಮೆಚ್ಚಬೇಕು ಎಂದು ಜಗ್ಗೇಶ್ ಹೇಳಿದ್ದಾರೆ.

ಗೋವಿಂದಾಯ ನಮಃ, ಶ್ರಾವಣಿ ಸುಬ್ರಹ್ಮಣ್ಯ ಮತ್ತು ಶಿವಲಿಂಗ ಹಿಟ್ ಚಿತ್ರಗಳ ನಿರ್ಮಾಪಕ ಕೆಎ ಸುರೇಶ್ ಮೊನಿಫ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ತೋತಾಪುರಿ ನಿರ್ಮಿಸಿದ್ದಾರೆ. ದೊಡ್ಡ ಬಜೆಟ್‌ನಲ್ಲಿ ಎಂದು ಹೇಳಲಾದ ಈ ಚಿತ್ರವನ್ನು 100 ದಿನಗಳ ಶೆಡ್ಯೂಲ್‌ನಲ್ಲಿ ಚಿತ್ರೀಕರಿಸಲಾಗಿದೆ.

ನಿರ್ದೇಶಕ ವಿಜಯ ಪ್ರಸಾದ್ ಜೊತೆ ಸಿದ್ಲಿಂಗು, ನೀರ್​​ದೋಸೆ, ಪೆಟ್ರೋಮ್ಯಾಕ್ಸ್ ಸಿನಿಮಾಗಳನ್ನು ಮಾಡಿರುವ ಖಾಯಂ ನಟಿ ಅಂದ್ರೆ ಅದು ಬಹುಭಾಷೆ ನಟಿ ಸುಮನಾ ರಂಗನಾಥ್ ಈ ಚಿತ್ರದಲ್ಲಿ ಸಿಸ್ಟರ್ ವಿಕ್ಟೋರಿಯಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅದಿತಿ ಪ್ರಭುದೇವ, ಸುಮನ್ ರಂಗನಾಥ್, ಡಾಲಿ ಧನಂಜಯ್ ,ವೀಣಾ ಸುಂದರ್ ಮತ್ತು ದತ್ತಣ್ಣ ಮುಂತಾದವರ ತಾರಾಬಳಗವಿದೆ, ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!