ಜಗ್ಗೇಶ್ ಮತ್ತು ವಿಜಯ್ ಪ್ರಸಾದ್ ಕಾಂಬಿನೇಶನ್ ನ ‘ತೋತಾಪುರಿ’ ಸಿನಿಮಾ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದ್ದು ಚಿತ್ರತಂಡ ಸಿದ್ಧತೆ ನಡೆಸಿದೆ.
‘ನೀರ್ ದೋಸೆ’ ಸಿನಿಮಾ ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದ ‘ತೋತಾಪುರಿ’ ಸಿನಿಮಾದಲ್ಲಿ ಜಗ್ಗೇಶ್ಗೆ ಜೋಡಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಬಿಡುಗಡೆಗೂ ಮುನ್ನ ‘ತೋತಾಪುರಿ’ ಸಿನಿಮಾ ಎರಡು ಭಾಗಗಳಲ್ಲಿ ನಿರ್ಮಾಣವಾಗಿದ್ದು, ಸೆಪ್ಟೆಂಬರ್ 30 ರಂದು ಮೊದಲ ಭಾಗ ರಿಲೀಸ್ ಆಗಲಿದೆ.
ಮೈಸೂರು ಸುತ್ತಮುತ್ತ ನಡೆಯುವ ಕಥೆ ಈ ಸಿನಿಮಾದಲ್ಲಿದೆ. ಚಿತ್ರ ನಾಡಹಬ್ಬ ದಸರಾಕ್ಕಿಂತ ಒಂದು ವಾರ ಮೊದಲು ಬರುತ್ತಿರುವುದರಿಂದ ಸಿನಿಮಾ ಮೇಲಿನ ನಿರೀಕ್ಷೆಯೂ ಜಾಸ್ತಿಯಾಗುತ್ತಿದೆ.
ಈ ಸಿನಿಮಾವನ್ನು 40 ದೇಶಗಳಲ್ಲಿ ಏಕಕಾಲಕ್ಕೆ ರಿಲೀಸ್ ಮಾಡುವುದಾಗಿ ನಿರ್ಮಾಪಕ ಕೆ ಎ ಸುರೇಶ್ ಹೇಳಿದ್ದಾರೆ. ಈ ಸಿನಿಮಾವನ್ನು ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.
ಡಾಲಿ ಧನಂಜಯ ಪ್ರಮುಖ ಪಾತ್ರದಲ್ಲಿರುವ ಈ ಸಿನಿಮಾದಲ್ಲಿ ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್ ಮುಂತಾದವರಿದ್ದಾರೆ.
___






Be the first to comment