ನಾಳೆ ತೋತಾಪುರಿ, ಕಾಂತಾರ ತೆರೆಗೆ

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಸೆ.30ರಂದು ಹಲವು ಚಿತ್ರಗಳು ರಿಲೀಸ್ ಆಗುತ್ತಿವೆ.

ಕನ್ನಡದ ‘ಕಾಂತಾರ’, ‘ತೋತಾಪುರಿ’, ಹಿಂದಿಯ ‘ವಿಕ್ರಮ್ ವೇದ’ ಹಾಗೂ ತಮಿಳಿನ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ರಿಲೀಸ್ ಆಗುತ್ತಿವೆ.

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾ ನಾಳೆ ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಟ್ರೇಲರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ.

ಜಗ್ಗೇಶ್ ಹಾಗೂ ಅದಿತಿ ಪ್ರಭುದೇವ ಅವರು ನಟಿಸಿರುವ ‘ತೋತಾಪುರಿ’ ಸಿನಿಮಾದಲ್ಲಿ ಬಹು ನಿರೀಕ್ಷಿತ ಚಿತ್ರ ಆಗಿದೆ. ಈ ಚಿತ್ರದ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ. ಚಿತ್ರಕ್ಕೆ ವಿಜಯ್ ಪ್ರಸಾದ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದಲ್ಲಿ ಭರ್ಜರಿ ಮನರಂಜನೆ ಇರಲಿದೆ ಎಂಬ ನಿರೀಕ್ಷೆ ಇದೆ. ಡಾಲಿ ಧನಂಜಯ, ದತ್ತಣ್ಣ, ಸುಮನ್ ರಂಗನಾಥ್ ಮೊದಲಾದವರು ನಟಿಸಿದ್ದಾರೆ.

‘ಪೊನ್ನಿಯಿನ್​ ಸೆಲ್ವನ್’​ ಚಿತ್ರಕ್ಕೆ ಮಣಿರತ್ನಂ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಸ್ಟಾರ್ ಕಲಾವಿದರಾದ ಐಶ್ವರ್ಯಾ ರೈ ಬಚ್ಚನ್​, ಚಿಯಾನ್​ ವಿಕ್ರಮ್​, ಕಾರ್ತಿ, ಜಯಂ ರವಿ, ತ್ರಿಷಾ, ಪ್ರಕಾಶ್​ ರಾಜ್​ ಮುಂತಾದವರು ಅಭಿನಯಿಸಿದ್ದಾರೆ. ಎ.ಆರ್​. ರೆಹಮಾನ್​ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಟ್ರೇಲರ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಹಿಂದಿಯ ‘ವಿಕ್ರಮ್ ವೇದ’ ಹೃತಿಕ್ ರೋಶನ್ ನಟನೆಯ ಚಿತ್ರ. ಈಗಾಗಲೇ ಚಿತ್ರ ಪ್ರೇಕ್ಷಕರ ಗಮನ ಸೆಳೆದಿದೆ. ಬಿಡುಗಡೆ ಬಳಿಕ ಜನರ ಸ್ಪಂದನೆ ಗೊತ್ತಾಗಲಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!