Totapuri 2 : ಅ.11ಕ್ಕೆ ಜೈಲರ್​’ ಎದುರು ಪೈಪೋಟಿ ನೀಡಲಿರುವ ‘ತೋತಾಪುರಿ 2 ಸಿನಿಮಾ ಅದ್ದೂರಿಯಾಗಿ ಬಿಡುಗಡೆ

ಜಗ್ಗೇಶ್ ಮತ್ತು ಡಾಲಿ ಧನಂಜಯ್ ಅವರ ಕಾಂಬಿನೇಷ​ನ್‌ನಲ್ಲಿ ‘ತೋತಾಪುರಿ 2’ ಸಿನಿಮಾ ಮೂಡಿಬಂದಿದೆ. ‘ಜೈಲರ್​’ ಚಿತ್ರದ ಎದುರು ಈ ಸಿನಿಮಾ ರಿಲೀಸ್​ ಆಗಲಿದೆ.

ಬೇರೆ ಬೇರೆ ಸ್ಟಾರ್​ ನಟರ ಸಿನಿಮಾಗಳು ಒಂದೇ ಸಮಯದಲ್ಲಿ ಬಿಡುಗಡೆಯಾದರೆ ಬಾಕ್ಸ್​ ಆಫೀಸ್​ನಲ್ಲಿ ಕ್ಲ್ಯಾಶ್​ ಏರ್ಪಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಡೇಟ್​ ಕ್ಲ್ಯಾಶ್​ ತಪ್ಪಿಸಲು ನಿರ್ಮಾಪಕರು ಪ್ರಯತ್ನಿಸುತ್ತಾರೆ. 2023ರ ದ್ವಿತೀಯಾರ್ಧದಲ್ಲಿ ಅನೇಕ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಬಿಡುಗಡೆ ಆಗುತ್ತಿವೆ. ಕೆಲವು ಸಂದರ್ಭಗಳಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾಗಳು ಮುಖಾಮುಖಿ ಆಗುವುದು ಅನಿವಾರ್ಯ. ಈಗ ತಮಿಳಿನ ‘ಜೈಲರ್​’ ಸಿನಿಮಾ ಮತ್ತು ಕನ್ನಡದ ‘ತೋತಾಪುರಿ 2’ ಸಿನಿಮಾ ಒಂದು ದಿನದ ಅಂತರದಲ್ಲಿ ಬಿಡುಗಡೆ ಆಗುತ್ತಿವೆ.

 ‘ಜೈಲರ್​’ ಚಿತ್ರದಲ್ಲಿ ರಜನಿಕಾಂತ್​ ಮತ್ತು ಶಿವರಾಜ್​ಕುಮಾರ್​ ನಟಿಸಿದ್ದಾರೆ. ‘ತೋತಾಪುರಿ 2’  ಸಿನಿಮಾದಲ್ಲಿ ಜಗ್ಗೇಶ್, ಡಾಲಿ ಧನಂಜಯ್ ಮುಂತಾದವರು ಅಭಿನಯಿಸಿದ್ದಾರೆ.

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಜೈಲರ್​’ ಚಿತ್ರ ಮುಂಚೂಣಿಯಲ್ಲಿದೆ. ‘ಸೂಪರ್​ ಸ್ಟಾರ್​’ ರಜನಿಕಾಂತ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ಆಗಸ್ಟ್​ 10ರಂದು ಬಿಡುಗಡೆ ಆಗಲಿದೆ ಎಂದು ಘೋಷಣೆ ಆದ ಬಳಿಕ ಇದರ ಎದುರು ಬರಲು ಕನ್ನಡದ ಯಾವುದೇ ಸಿನಿಮಾಗಳು ಸಿದ್ಧವಿರಲಿಲ್ಲ. ಆದರೆ, ಈಗ ‘ಜೈಲರ್’ ಎದುರು ಪೈಪೋಟಿ ನೀಡಲು ‘ತೋತಾಪುರಿ 2’ ಸಿನಿಮಾ ಸಜ್ಜಾಗಿದೆ. ಜೈಲರ್​ ಬಿಡುಗಡೆಯಾದ ಒಂದು ದಿನದ ಬಳಿಕ ಅಂದರೆ, ಆಗಸ್ಟ್​ 11ರಂದು ‘ತೋತಾಪುರಿ 2’ ತೆರೆಕಾಣಲಿದೆ.

2022ರ ಸೆಪ್ಟೆಂಬರ್​ನಲ್ಲಿ ‘ತೋತಾಪುರಿ 1’ ಸಿನಿಮಾ ತೆರೆಕಂಡಿತ್ತು. ಆ ಸಿನಿಮಾದ ‘ಬಾಗ್ಲು ತೆಗಿ ಮೇರಿ ಜಾನ್..’ ಗೀತೆ ಬಹಳ ವೈರಲ್​ ಆಗಿತ್ತು. ಇತ್ತೀಚೆಗಷ್ಟೇ ‘ತೋತಾಪುರಿ 2’ ಸಿನಿಮಾದ ಮೊದಲ ಸಾಂಗ್​ ಬಿಡುಗಡೆ ಮಾಡಲಾಗಿದೆ. ಹೃದಯಶಿವ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ‘ಮೊದಲ ಮಳೆ ಮನದೊಳಗೆ…’ ಎಂದು ಈ ಹಾಡಿಗೆ ಜನಮೆಚ್ಚುಗೆ ಸಿಗುತ್ತಿದೆ. ಇದರಲ್ಲಿ ಧನಂಜಯ್ ಮತ್ತು ಸುಮನ್ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಸಂಜಿತ್ ಹೆಗಡೆ ಅವರ ಕಂಠದಲ್ಲಿ ಈ ಗೀತೆ ಮೂಡಿಬಂದಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!