ಮಗನ ಜೊತೆ ನಟಿಯ ಬೆತ್ತಲೆ ಫೋಟೋ!

ಜನಪ್ರಿಯ ನಟಿ  ರೋಜಾ  ತಮ್ಮ ಮಗನ ಜೊತೆ ಬೆತ್ತಲೆ ಫೋಟೋ ಮಾರ್ಫ್ ಮಾಡಿದ  ಬಗ್ಗೆ  ಕಣ್ಣೀರು ಹಾಕಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ವೈಆರ್‌ಎಸ್ ಕಾಂಗ್ರೆಸ್ ಪಕ್ಷದ ಫೈರ್‌ಬ್ರ್ಯಾಂಡ್ ಎನಿಸಿಕೊಂಡ ರೋಜಾ ತಮ್ಮ ವಿರುದ್ಧ ನಡೆಯುತ್ತಿರುವ ದ್ವೇಷ ರಾಜಕಾರಣದ ಬಗ್ಗೆ  ಹೇಳಿಕೊಂಡಿದ್ದಾರೆ. ಕಿರುಕುಳದ ಬಗ್ಗೆ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

“ನನ್ನ ಮಗ ಬಂದು ನನ್ನನ್ನು ತಬ್ಬಿಕೊಳ್ಳುತ್ತಾನೆ. ಅಂತಹ ಫೋಟೊಗಳನ್ನು ಬೆತ್ತಲಾಗಿ ಎಡಿಟ್ ಮಾಡಿ ಅವನಿಗೆ ಕಳ್ಸಿದ್ದಾರೆ. ನನ್ನ ಮಗ ಸದಾ ಆಕ್ಟೀವ್ ಆಗಿ ಇರುತ್ತಿದ್ದ. ಈ ಫೋಟೊಗಳನ್ನು ನೋಡಿದ ಮೇಲೆ ಡಿಪ್ರೆಷನ್‌ಗೆ ಹೋಗಿದ್ದ. ಇದ್ದಕ್ಕಿದಂತೆ ಸೈಲೆಂಟ್ ಆಗಿಬಿಟ್ಟ. ಬಳಿಕ ಯಾಕೆ ಎಂದು ವಿಚಾರಿಸಿದ್ದಾಗ ನಿಧಾನವಾಗಿ ಆ ಫೋಟೊಗಳ ವಿಚಾರ ಹೇಳಿದ. ಆ ಫೋಟೊಗಳನ್ನು ನೋಡಿದಾಗ ಸೂಸೈಡ್ ಮಾಡಿಕೊಳ್ಳಬೇಕು ಎನಿಸಿತು. ನನಗೆ ಆ ರೀತಿ ಅನಿಸಿದ್ರೆ, ನನ್ನ ಮಗನಿಗೆ ಹೇಗೆ ಅನಿಸಬಹುದು? ಇಂತಹ ಟಾರ್ಚರ್ ತಡೆಯೋಕೆ ಆಗದೇ ನನ್ನ ಮಗಳು ಅಮೆರಿಕಾಗೆ ಹೋಗಿಬಿಟ್ಲು” ಎಂದು ರೋಜಾ ಕಣ್ಣೀರು ಹಾಕಿದ್ದಾರೆ.

‘ನಾನು ತಿರುಪತಿಯಲ್ಲಿ ಹುಟ್ಟಿ ಚೆನ್ನೈನಲ್ಲಿ ಬೆಳೆದೆ. ಬಳಿಕ ಚಿತ್ರರಂಗಕ್ಕೆ ಬಂದೆ. ಈಗ ರಾಜಕೀಯರಂಗದಲ್ಲಿದ್ದೀನಿ. ಟಿಡಿಪಿಯವರನ್ನು, ಕೆಲವರನ್ನು ಬಳಸಿಕೊಂಡು ನನ್ನನ್ನು ಬೈಯ್ಯುವಂತೆ ಮಾಡಿದ್ದಾರೆ.  ನನಗೆ ನೋವು ಕೊಟ್ಟವರು ಸರಿಯಾಗಿ ಪೆಟ್ಟು ತಿಂದಿದ್ದಾರೆ. ಸಿಎಂ ಚಂದ್ರಬಾಬು ನಾಯ್ಡುಗೂ ಈ ಅನುಭವವಾಗಿದೆ. ಮತ್ತೆ ನನ್ನ ತಂಟೆಗೆ ಬರ್ತಿದ್ದಾರೆ. ಪ್ರತಿಫಲ ಕಟ್ಟಿಟ್ಟ ಬುತ್ತಿ’ ಎಂದು ವಿವರಿಸಿದ್ದಾರೆ.

‘ಕಳೆದ ಆಂಧ್ರ ಚುನಾವಣೆಯಲ್ಲಿ ವೈಆರ್‌ಎಸ್ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತಿತ್ತು. ಬಿಜೆಪಿ, ಟಿಡಿಪಿ ಹಾಗೂ ಜನಸೇನಾ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಟಿಡಿಪಿ ಹಾಗೂ ಜನಸೇನಾ ನಾಯಕರು, ಅವರ ಹಿಂಬಾಲಕರು ನನಗೆ ಹಿಂಸೆ ನೀಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ಸ್ ಮಾಡಿ ನೋವು ಕೊಡುತ್ತಿದ್ದಾರೆ’ ಎಂದು  ಬೇಸರ ವ್ಯಕ್ತಪಡಿಸಿದ್ದಾರೆ.

‘ನಾನು ವರಲಕ್ಷ್ಮಿ ವ್ರತ, ಸಂಕ್ರಾಂತಿ ಹಬ್ಬ, ಮಕ್ಕಳ ಹುಟ್ಟು ಆಚರಿಸಿ ಫೋಟೊ, ವೀಡಿಯೋ ಶೇರ್ ಮಾಡಿದ್ರೆ ಅದಕ್ಕೂ ಕೆಟ್ಟದಾಗಿ ಕಾಮೆಂಟ್ ಮಾಡ್ತಾರೆ. ಟಿಟಿಪಿ ಹಾಗೂ ಜನಸೇನಾ ನಾಯಕರು ಬೇಕೆಂದೇ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.


Be the first to comment

Leave a Reply

Your email address will not be published. Required fields are marked *

Translate »
error: Content is protected !!