ಕನ್ನಡ ಭಾಷೆಯಲ್ಲಿ ಚಿತ್ರವು ಗೆದ್ದಿತು ಅಂದರೆ ಎಲ್ಲಾ ಕಡೆಗಳಲ್ಲಿ ಸಪಲರಾಗಬಹುದೆಂದು ಲಗಾಯ್ತಿನಲ್ಲಿ ನಿರ್ದೇಶಕರುಗಳಾದ ಬಾಲುಮಹೇಂದ್ರ, ಮಣಿರತ್ನಂ ಹೇಳುತ್ತಿದ್ದರಂತೆ. ಅದು ಈಗಲೂ ನಡೆಯುತ್ತಿದೆ. ಅದಕ್ಕಾಗಿ ಬೇರೆ ಭಾಷೆಯ ಚಿತ್ರರಂಗದವರು ಪರೀಕ್ಷೆ ಮಾಡಲು ಸ್ಯಾಂಡಲ್ವುಡ್ನಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುವುದುಂಟು. ಆ ಸಾಲಿಗೆ ಆಂದ್ರದವರಿಂದ ‘ರೇಸ್’ ಎನ್ನುವ ಚಿತ್ರವೊಂದು ಸದ್ದಿಲ್ಲದೆ ಬಿಡುಗಡೆಗೆ ಸಿದ್ದಗೊಂಡಿದೆ. ಬದುಕು, ಪ್ರೀತಿ, ಹಣ ಮತ್ತು ಅಪರಾಧ ಇವುಗಳು ಹಲವರ ಜೀವನದಲ್ಲಿ ರೇಸ್ನಂತೆ ಬಂದು ಹೋಗುತ್ತದೆ. ಕತೆಯು ಕೂಡ ಈ ರೀತಿ ಇರಲಿದ್ದು, ಜೊತೆಗೆ ಸೆಸ್ಪನ್ಸ್, ಥ್ರಿಲ್ಲರ್ನಿಂದ ಕೂಡಿದೆ. ಒಂದು ಏಳೆ ಹೇಳಿದರೂ ಸಿನಿಮಾದ ಸಾರಾಂಶ ತಿಳಿಯುತ್ತದೆಂದು ತಂಡವು ಎಲ್ಲವನ್ನು ಗೌಪ್ಯವಾಗಿಟ್ಟಿದೆ. ಸಂಪೂರ್ಣ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ಹತ್ತಕ್ಕೂ ಹೆಚ್ಚು ತೆಲುಗು ಚಿತ್ರಗಳಿಗೆ ಸಹಾಯಕರಾಗಿ ಕೆಲಸ ಮಾಡಿರುವ ಹೇಮಂತ್ಕೃಷ್ಣ ಕತೆ,ಚಿತ್ರಕತೆ ಬರೆದು ನಿರ್ದೇಶನದ ಪಾರುಪಥ್ಯವನ್ನು ವಹಿಸಿಕೊಂಡಿದ್ದಾರೆ.
ಇನ್ಸ್ಪೆಕ್ಟರ್ ಪಾತ್ರದಲ್ಲಿ ಬಿಗ್ಬಾಸ್ ಖ್ಯಾತಿಯ ದಿವಾಕರ್, ನಾಲ್ಕು ಶೇಡ್ಗಳಲ್ಲಿ ಕಾಣಿಸಿಕೊಂಡಿರುವ ಸಂತೋಷ್, ಹುಡುಗಿ ಮುಂದೆ ಒಳ್ಳೆಯವನಾಗಿ, ಮರೆಯಾದರೆ ದುರಳನಂತೆ ವರ್ತಿಸುವ ನಕುಲ್ಗೋವಿಂದ್ ನಾಯಕರುಗಳು. ನವತಾರೆ ಮಂಗಳೂರಿನ ರಕ್ಷಾಷಣೈ ಮತ್ತು ಶೃತಿ ನಾಯಕಿಯರು. ಎರಡು ಹಾಡುಗಳಿಗೆ ರಾಜ್ಕಿರಣ್ ಸಂಗೀತ, ಚಕ್ರವರ್ತಿ ಛಾಯಾಗ್ರಹಣ, ಕ್ರಾಂತಿ ಸಂಕಲನ, ಸಾಹಸ ವೈ.ರವಿ ಹಾಗೂ ಹಿನ್ನಲೆ ಶಬ್ದವನ್ನು ಮಂತ್ರಆನಂದ್ ನಿರ್ವಹಿಸಿದ್ದಾರೆ. ತಂಡಕ್ಕೆ ಶುಭಹಾರೈಸಲು ಆಗಮಿಸಿದ್ದ ಲಹರಿವೇಲು ಮಾತನಾಡಿ ಪ್ರಸಕ್ತ ಚಿತ್ರರಂಗದಲ್ಲಿ ಎಲ್ಲರೂ ರೇಸ್ದಲ್ಲಿ ಇರ್ತಾರೆ. ಪ್ರತಿಯೊಬ್ಬರು ಇದರಲ್ಲಿ ಬಂದು ಯಾರು ಮುನ್ನುಗುತ್ತಾರೋ ಅವರಿಗೆ ಭವಿಷ್ಯದಲ್ಲಿ ಒಳ್ಳೆಯದಾಗುತ್ತದೆ. ಆದರೆ ಹೆಸರು ಬಂದ ಮೇಲೆ ಮರೆಯುತ್ತಾರೆ. ಮಾತಾಡುವ ಪರಿ ಬೇರೆಯದೆ ಆಗಿರುತ್ತದೆ. ಎಷ್ಟೇ ಸಕ್ಸಸ್ ಕೊಟ್ಟರೂ ಶ್ರದ್ದೆ, ವಿಧೆಯತೆಯಿಂದ ಇರುವವರಿಗೆ ಎಲ್ಲಾ ಕಾಲದಲ್ಲೂ ಚೆನ್ನಾಗಿರುತ್ತಾರೆಂದು ಕಿವಿ ಮಾತು ಹೇಳಿದರು.ರಾಜಕುಮಾರ ನಿರ್ದೇಶಕ ಸಂತೋಷ್ಆನಂದರಾಮ್ ಟ್ರೈಲರ್ ಬಿಡುಗಡೆ ಮಾಡಿ ಮಾಧ್ಯಮದ ಸಹಕಾರವನ್ನು ನೆನದರು. ಮತ್ತೋಬ್ಬ ನಿರ್ದೇಶಕ ಜಿ.ಮಾದೇಶ್ ಉಪಸ್ತಿತರಿದ್ದರು. ಟಾಲಿವುಡ್ನ ಎಸ್.ವೆಂಕಟೇಶರಾವ್ ನಿರ್ಮಾಣ ಮಾಡಿರುವ ಚಿತ್ರವು ಇದೇ 24ರಂದು ತೆರೆ ಕಾಣಲಿದೆ.
Pingback: sscn.bkn.go.id 2022 pppk