ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಭಾನುವಾರ ಮಾತ್ರ ನಡೆಯಲಿದೆ. ಇಂದು ಪ್ರಿ ಫಿನಾಲೆ ನಡೆಯಲಿದೆ.
ನವರಿ 17 ಮತ್ತು ನಾಳೆ ಜನವರಿ 18 ರಂದು ಎರಡು ದಿನಗಳ ಫಿನಾಲೆ ಎಪಿಸೋಡ್ ಪ್ರಸಾರಗೊಳ್ಳಬೇಕಿತ್ತು. ಆದರೆ ಈ ಸೀಸನ್ ನಲ್ಲಿ ಕಲರ್ಸ್ ಕನ್ನಡ ಚಾನೆಲ್ ಮಾರ್ಪಾಡು ಮಾಡಿದೆ. ಆದರೆ ಈ ಬಾರಿ ಸೀಸನ್ 12ರ ಫಿನಾಲೆ ಒಂದೇ ದಿನ ನಡೆಯಲಿದೆ.
ನಿರೂಪಕ ಸುದೀಪ್ ಅವರು ಇಂದು ಆಗಮಿಸಲು ಸಾಧ್ಯವಾಗದ ಹಿನ್ನೆಲೆ ಫಿನಾಲೆ ಕಾರ್ಯಕ್ರಮವನ್ನು ಭಾನುವಾರಕ್ಕೆ ಸೀಮಿತಗೊಳಿಸಲಾಗಿದೆ. ಜನವರಿ 16ರಂದು ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ‘ಪಂಜಾಬ್ ದೆ ಶೇರ್’ ವಿರುದ್ಧ ಗೆಲುವು ಸಾಧಿಸಿದೆ. ಸುದೀಪ್ ಗೆ ಪಂದ್ಯ ಮುಗಿಸಿ ರಾತ್ರಿ ಬೆಂಗಳೂರಿಗೆ ಬಂದು ಬೆಳಿಗ್ಗೆ ಶೂಟಿಂಗ್ ಮಾಡುವುದು ಅಸಾಧ್ಯವಾದ ಕಾರಣದಿಂದಲೇ ಒಂದು ದಿನ ಬಿಡುವು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
‘ನಿಮ್ಮ ಫೇವರೇಟ್ ಸ್ಪರ್ಧಿ ಯಾರು? ಕಮೆಂಟ್ ಮಾಡಿ. ಬಿಗ್ ಬಾಸ್ | ಪ್ರೀ ಗ್ರಾಂಡ್ ಫಿನಾಲೆ, ಇಂದು ರಾತ್ರಿ 9’ ಎಂದು ವಾಹಿನಿ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.
ಬಿಗ್ ಬಾಸ್ ಕನ್ನಡದಲ್ಲಿ ಫಿನಾಲೆ ಎಪಿಸೋಡ್ ಎರಡು ದಿನಗಳ ವಿಶೇಷ ಕಾರ್ಯಕ್ರಮವಾಗಿ ಪ್ರಸಾರವಾಗುತ್ತಿತ್ತು. ಫೈನಲಿಸ್ಟ್‌ಗಳ ಪ್ರದರ್ಶನ, ಹಳೆ ಸ್ಪರ್ಧಿಗಳ ರೀ-ಎಂಟ್ರಿ, ವಿಶೇಷ ಅತಿಥಿ, ನಿರೂಪಕ ಕಿಚ್ಚ ಸುದೀಪ್ ಹರಟೆ, ಮಾತುಕತೆ ಹೀಗೆ ಎರಡು ದಿನ ಕಾರ್ಯಕ್ರಮ ಮಜಾ ಕೊಡುತ್ತಿತ್ತು.
ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿ ಯಾರು ವಿನ್ ಆಗಬಹುದೆಂಬ ಚರ್ಚೆ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ನಡೆಯುತ್ತಿದೆ.
—–





Be the first to comment