‘ತಿಪ್ಪಾರಳ್ಳೀಲಿ ತಿಮ್ಮಣ್ಣ ಡಾಕ್ಟ್ರು’ ಶೀಘ್ರ ಬಿಡುಗಡೆ

ಕಾಮಿಡಿ ಸಿನಿಮಾ ‘ತಿಪ್ಪಾರಳ್ಳೀಲಿ ತಿಮ್ಮಣ್ಣ ಡಾಕ್ಟ್ರು’ ಶೀಘ್ರ ಬಿಡುಗಡೆ ಆಗಲಿದೆ.

ಚಿತ್ರಕ್ಕೆ ಕೆ. ಮೋಹನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಸೆನ್ಸಾರ್‌ ಪ್ರಕ್ರಿಯೆ ಮುಗಿದಿದೆ. ಸಿನಿಮಾದಲ್ಲಿ ಬೆಳಗಾವಿ ಮೂಲದ ಉದ್ಯಮಿ ಗಿರೀಶ ಪ್ರಕಾಶ ಭಸ್ಮೇ ಅವರು ಹೀರೋ ಆಗಿ ನಟಿಸಿದ್ದಾರೆ.   ‘ಶ್ರೀ ದಾನಮ್ಮ ದೇವಿ ಫಿಲ್ಸ್ಮ್’ ಬ್ಯಾನರ್ ಮೂಲಕ ಅವರೇ ಸಿನಿಮಾ ನಿರ್ಮಾಣ  ಮಾಡಿದ್ದಾರೆ.

‘ನಾನು ಹೆಚ್2ಓ, ಶ್ರೀರಾಂಪುರ ಪೋಲೀಸ್ ಸ್ಟೇಷನ್ ಮುಂತಾದ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿದ್ದೇನೆ. ಒಮ್ಮೆ ನಿರ್ದೇಶಕರೊಂದಿಗೆ ಶುರುವಾದ ಪರಿಚಯ ಇಲ್ಲಿಯವರೆಗೂ ತಂದು ನಿಲ್ಲಿಸಿದೆ.  ಚಿತ್ರದಲ್ಲಿ ಹಾಸ್ಯ, ಭಾವನೆಗಳು, ಪ್ರೀತಿ ತುಂಬಿದೆ. ವೀಕ್ಷಕರಿಗೆ ಮನರಂಜನೆ ನೀಡಲಿದೆ’ ಎಂದು ಗಿರೀಶ್ ಪ್ರಕಾಶ ಭಸ್ಮೇ ಅವರು ಹೇಳಿದ್ದಾರೆ.

ಸಿನಿಮಾಗೆ ಕೆ. ಮೋಹನ್ ಕುಮಾರ್  ಕಥೆ,ಚಿತ್ರಕಥೆ, ಸಂಭಾಷಣೆ, ಮೂರು ಹಾಡುಗಳಿಗೆ ಅವರೇ ಸಾಹಿತ್ಯ ರಚಿಸಿದ್ದಾರೆ.  ನಾಯಕಿಯಾಗಿ ಪಾವನಿ ಅವರು ಅಭಿನಯಿಸಿದ್ದಾರೆ.  ಮೈಸೂರು ರಮಾನಂದ್, ಸತೀಶ್‌ ಗೌಡ, ಆಲಿಶಾ, ಶೂಟಿಂಗ್ ಕೃಷ್ಣ ಮುಂತಾದವರು ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಗೋಪಿ ಕಲಾಕಾರ್ ಅವರ ಸಂಗೀತ, ಹೊಸೂರು ಮಂಜು ಛಾಯಾಗ್ರಹಣ, . ಸಂತೋಷ್ ರಾಥೋಡ್  ಸಾಹಸ ನಿರ್ದೇಶನ, ಡಾಲಿ ರಮೇಶ್ ಅವರ ನೃತ್ಯ ನಿರ್ದೇಶನ ಸಿನಿಮಾಗಿದೆ.

ಪ್ರಚಾರದ ಮೊದಲ ಹಂತವಾಗಿ ‘ತಿಪ್ಪಾರಳ್ಳೀಲಿ ತಿಮ್ಮಣ್ಣ ಡಾಕ್ಟ್ರು’ ಟ್ರೇಲರ್ ಮತ್ತು ಹಾಡನ್ನು ಬಿಡುಗಡೆ ಮಾಡಲಾಗಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!