ಹೊಸಬರ ‘ಟೈಮ್ ಪಾಸ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು ಕುತೂಹಲ ಮೂಡಿಸಿದೆ.
ಕೆ ಚೇತನ್ ಜೋಡಿದಾರ್ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಟೈಮ್ ಪಾಸ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸಿನಿಮಾ ಕುರಿತು ವ್ಯಾಮೋಹ ಹೊಂದಿರುವ ಏಳು ಪಾತ್ರಗಳು ಒಂದೆಡೆ ಸೇರಿದಾಗ ತೆರೆದುಕೊಳ್ಳುವ ಕಥೆಯನ್ನು ಚಿತ್ರ ಒಳಗೊಂಡಿದೆ.
ನಿರ್ದೇಶಕ ಚೇತನ್‌ಗೆ ಯಾವುದೇ ನಟನಾ ಶಾಲೆಯ ಹಿನ್ನೆಲೆ ಅಥವಾ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಅನುಭವವಿಲ್ಲ. ಅವರು ಸಿನಿಮಾಗಳನ್ನು ನೋಡುವ ಮೂಲಕ ಮತ್ತು ಟ್ಯುಟೋರಿಯಲ್‌ಗಳನ್ನು ಅಧ್ಯಯನ ಮಾಡುವ ಮೂಲಕ ನಿರ್ದೇಶನಕ್ಕೆ ಇಳಿದಿದ್ದಾರೆ. ಚಿತ್ರದ ತಾರಾಗಣದಲ್ಲಿ ಇಮ್ರಾನ್ ಪಾಷಾ, ವೈಸಿರಿ ಕೆ ಗೌಡ, ಓಂ ಶ್ರೀ ಮತ್ತು ಚೇತನ್ ಇದ್ದಾರೆ.
ಚಿತ್ರಕ್ಕೆ ರಾಜೀವ್ ಗಣೇಶನ್ ಛಾಯಾಗ್ರಹಣ, ಹರಿ ಪರಮ್ ಸಂಕಲನ ಮತ್ತು ಡಿಕೆ (ಡಿಎಂ ಉದಯಕುಮಾರ್) ಸಂಗೀತ ಸಂಯೋಜನೆಯಿದೆ. ಚೇತನ್ ಮತ್ತು ವೈಷ್ಣವಿ ಸತ್ಯನಾರಾಯಣ್ ಸಾಹಿತ್ಯ ಬರೆದಿದ್ದಾರೆ. ಚೇತನ್ ಮತ್ತು ವೈಷ್ಣವಿ ಸತ್ಯನಾರಾಯಣ್ ಸಾಹಿತ್ಯ ಬರೆದಿದ್ದಾರೆ.
ಶ್ರೀ ಚೇತನಾ ಸರ್ವಿಸಸ್, ಗುಂಡೂರು ಶೇಖರ್, ಕಿರಣ್ ಕುಮಾರ್ ಶೆಟ್ಟಿ ಮತ್ತು ಎಂಎಚ್ ಕೃಷ್ಣಮೂರ್ತಿ ‘ಟೈಮ್ ಪಾಸ್’ ನಿರ್ಮಿಸಿದ್ದಾರೆ.
—-

Be the first to comment