ರಜನಿಕಾಂತ್ ನಟನೆಯ “ಕೂಲಿ” ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು , ಟಿಕೆಟ್ ಬೆಲೆ ಹೆಚ್ಚಾಗಿರುವುದು ಜನಸಾಮಾನ್ಯರಿಗೆ ತೊಂದರೆಯಾಗಿದೆ.
‘ಕೂಲಿ’ ಚಿತ್ರ ಆಗಸ್ಟ್ 14 ರಂದು ಬಿಡುಗಡೆಯಾಗುತ್ತಿದೆ. 375 ಕೋಟಿಗೂ ಅಧಿಕ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ತೆಲುಗು ನಟ ನಾಗಾರ್ಜುನ, ಕನ್ನಡದ ಸ್ಟಾರ್ ಹೀರೋ, ಉಪೇಂದ್ರ ಮತ್ತು ಬಹುಭಾಷಾ ನಟಿ ಶ್ರುತಿ ಹಾಸನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮುಂಗಡ ಬುಕಿಂಗ್‌ನಿಂದ ‘ಕೂಲಿ’ ಚಿತ್ರಕ್ಕೆ 75 ಕೋಟಿ ರೂಪಾಯಿ ಗಳಿಕೆ ಆಗಿದೆ. ಬೆಂಗಳೂರಿನಲ್ಲಿ ಟಿಕೆಟ್ ದರಗಳು 400-600 ರೂಪಾಯಿಗಳವರೆಗೆ ತಲುಪಿವೆ. ಇದರಿಂದಾಗಿ ಚಿತ್ರಮಂದಿರಕ್ಕೆ ಹೋಗುವುದು ದುಬಾರಿಯಾಗಿದೆ.
‘ಕೂಲಿ’ ಸಿನಿಮಾ ಚೆನ್ನೈನಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಚಿತ್ರ ಚೆನ್ನೈನ ಬಹುತೇಕ ಮಲ್ಟಿಪ್ಲೆಕ್ಸ್ನಲ್ಲಿ 183 ರೂ. ಗೆ ವೀಕ್ಷಣೆಗೆ ಸಿಗುತ್ತಿದೆ. ಕೆಲವು ಕಡೆಗಳಲ್ಲಿ 190 ರೂಪಾಯಿ ಇದೆ. ಆದರೆ ಬೆಂಗಳೂರಿನ ಮಲ್ಟಿಪ್ಲೆಕ್ಸ್ನಲ್ಲಿ ಟಿಕೆಟ್ ದರ ಗಗನಕ್ಕೇರಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್ಗಳು ಟಿಕೆಟ್ ಬೆಲೆ 250-300 ರೂಪಾಯಿಗೆ ಏರಿಸಿವೆ. ಮಲ್ಟಿಪ್ಲೆಕ್ಸ್ಗಳಲ್ಲಿ 400 ರೂಪಾಯಿಯಿಂದ ಕೆಲವು ಕಡೆಗಳಲ್ಲಿ 500, 600 ರೂಪಾಯಿ ಇದೆ. ಜನ ಸಾಮಾನ್ಯರಿಗೆ ಈ ದರ ಎಟುಕುವ ರೀತಿಯಲ್ಲಿ ಇಲ್ಲ.
ಮನೆಯವರು ಸಿನಿಮಾ ನೋಡೋಕೆ ಹೋದರೆ ಜೇಬಿಗೆ ಒಂದೂವರೆ ಸಾವಿರ ರೂಪಾಯಿ ಕತ್ತರಿ ಬೀಳೋದು ಗ್ಯಾರಂಟಿ. ಈ ಹಣದಲ್ಲಿ ಒಂದು ವಾರದ ರೇಷನ್ ಬರುತ್ತೆ ಎಂದು ಅನೇಕರು ಮಾತನಾಡಿಕೊಂಡಿದ್ದಾರೆ.
ಸನ್ ಪಿಕ್ಚರ್ಸ್ ‘ಕೂಲಿ’ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸಿನಿಮಾ ವಿಶ್ವಾದ್ಯಂತ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ.
—-





Pingback: cheap enclomiphene price for prescription