ಆಂಧ್ರದಲ್ಲಿಏಕರೂಪ ಟಿಕೆಟ್ ದರದ ಚರ್ಚೆ

ಆಂಧ್ರ ಪ್ರದೇಶದಲ್ಲಿ ಏಕರೂಪ ಟಿಕೆಟ್ ದರದ ಚರ್ಚೆ ಮುನ್ನೆಲೆಗೆ ಬಂದಿದೆ.

ಆಂಧ್ರ ಪ್ರದೇಶದಲ್ಲಿ ಹೆಚ್ಚಿನ ಬಜೆಟ್‌ ಸಿನಿಮಾಗಳ ಬಿಡುಗಡೆ ಸಮಯದಲ್ಲಿ ಟಿಕೆಟ್ ದರ  ಸರ್ಕಾರಿ ಅನುಮತಿಯೊಂದಿಗೆ   ಹೆಚ್ಚಳವಾಗುತ್ತಿದೆ. ಕೆಲವು ದಿನಗಳು ಅಥವಾ ಒಂದು ವಾರವರೆಗೆ ಟಿಕೆಟ್ ದರ ಏರಿಸಲಾಗುತ್ತದೆ. ಹೆಚ್ಚಿನ ಬಜೆಟ್‌ ಸಿನಿಮಾಗಳ ಬಿಡುಗಡೆ ಸಮಯದಲ್ಲಿ ಟಿಕೆಟ್ ದರ ಹೆಚ್ಚಿಸುವ ಪದ್ಧತಿ ಜಜನರಲ್ಲಿ ಬೇಸರ ತಂದಿದೆ.

”ಏಕರೂಪ ಟಿಕೆಟ್ ದರದ ಬಗ್ಗೆ ಚರ್ಚೆ ನಡೆಯುತ್ತಿದೆ. ಟಿಕೆಟ್ ದರಗಳು ಸಿನಿಮಾ ಪ್ರೇಕ್ಷಕರಿಗೂ ಮತ್ತು ಚಿತ್ರರಂಗಕ್ಕೂ ಅನುಕೂಲಕರವಾಗಿರಬೇಕು”  ಎಂದು ಆಂಧ್ರದ ಸಿನೆಮಾ ಮತ್ತು ಚಿತ್ರರಂಗ ಸಚಿವ ಕಂಡುಲ ದುರ್ಗೇಶ್  ಹೇಳಿದ್ದಾರೆ.

ಸಣ್ಣ ಚಿತ್ರಗಳಿಗೆ ಹಾನಿ ಆಗದಂತೆ ಎಲ್ಲಾ ಚಿತ್ರಗಳಿಗೆ ಸಮಾನ ಅವಕಾಶ ದೊರೆಯುವಂತೆ ಮಾಡಲು ಆಂಧ್ರದ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರ  ಸಿನಿಮಾಪ್ರೇಮಿ, ಚಿತ್ರರಂಗಕ್ಕೂ ಲಾಭದಾಯಕವಾಗಿದೆ.

ಕರ್ನಾಟಕದಲ್ಲಿ ಏಕರೂಪ ಟಿಕೆಟ್ ದರ ಜಾರಿಗೆ ಆದೇಶ ಹೊರಡಿಸಲಾಗಿತ್ತು. ಆದರೆ ನ್ಯಾಯಾಲಯ ಅದನ್ನು ತಡೆಯಿತು. ಇತ್ತೀಚೆಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಿನಿಮಾ ಟಿಕೆಟ್ ದರದ ಚರ್ಚೆ ಜೋರಾಗಿದೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!