ಚಿತ್ರ : ಥಗ್ಸ್ ಆಫ್ ರಾಮಘಡ
ನಿರ್ದೇಶಕ : ಕಾರ್ತಿಕ್ ಮಾರಲಭಾವಿ
ನಿರ್ಮಾಪಕ : ಜೈ ಕುಮಾರ್
ತಾರಾಗಣ : ಅಶ್ವಿನ್ ಹಾಸನ್, ಚಂದನ್ ರಾಜ್, ಮಹಾಲಕ್ಷ್ಮಿ ಅನ್ನಪೂರ್ಣ, ಶರ್ಮಿಳ ಚಂದ್ರಶೇಖರ್, ಸೂರ್ಯ ಕಿರಣ್, ಟೈಗರ್ ಗಂಗ, ಜಗದೀಶ್, ವಿಶಾಲ್ ಪಾಟೀಲ್ ಮುಂತಾದವರು
ರೇಟಿಂಗ್: 3.5/5
ರಿವೇಂಜ್ ಕಥಾನಕದಲ್ಲಿ ಪ್ರೀತಿಯ ಕಥೆಯೊಂದಿಗೆ ಮೂಡಿ ಬಂದಿರುವ ಚಿತ್ರ ಥಗ್ಸ್ ಆಫ್ ರಾಮಘಡ.
ನಾಯಕ ಅರವಿಂದ್ (ಚಂದನ್ ರಾಜ್) ಶ್ರೀಮಂತರು, ರಾಜಕೀಯ ವ್ಯಕ್ತಿಗಳು, ಕಪ್ಪು ಹಣವನ್ನು ಚೀಟಿ ವ್ಯವಹಾರದಲ್ಲಿ ಹಾಕಿರುವುದನ್ನು ದೋಚಲು ರಾಮಘಡಕ್ಕೆ ಬಂದಿರುತ್ತಾನೆ. ಆಕಸ್ಮಿಕವಾಗಿ ಅರವಿಂದನ ಗುಂಡೇಟಿಗೆ ಬಲಿಯಾಗುವ ಮಲ್ಲಣ್ಣ ರೇಣುಕಾ (ಮಹಾಲಕ್ಷ್ಮಿ)ಳ ತಂದೆ ಎಂದು ತಿಳಿಯುತ್ತದೆ. ಮುಂದೆ ಅವನು ನಾಯಕಿ ರೇಣುಕಾ ಜೊತೆ ಪ್ರೀತಿಗೆ ಬೀಳುತ್ತಾನೆ.
ಸಿನಿಮಾದಲ್ಲಿ ರೇಣುಕಾ ಫ್ಲಾಶ್ ಬ್ಯಾಕ್ ಕೂಡಾ ತೆರೆದುಕೊಳ್ಳುತ್ತದೆ. ಗಂಡನ ಕಳೆದುಕೊಂಡ ರೇಣುಕಾಳ ತಾಯಿಗೆ ಆಶ್ರಯ ನೀಡುತ್ತೇನೆಂದು ನಂಬಿಸಿ ಆಕೆಯನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲಾಗುತ್ತದೆ. ಇದನ್ನು ಗಮನಿಸುವ ಮಗಳು ವಿಧಿಯಿಲ್ಲದೆ ಬದುಕುವಾಗ ತಾಯಿಯನ್ನು ಕಳೆದುಕೊಳ್ಳುತ್ತಾಳೆ. ಮುಂದೆ ರೇಣುಕಾ ಹಾಗೂ ಅವನ ಸಹೋದರ ಸಾಕು ತಂದೆ ಮಲ್ಲಣ್ಣ ಜೊತೆ ಬದುಕಬೇಕಾಗುತ್ತದೆ.
ಕಥಾನಾಯಕ ರೇಣುಕಾಳನ್ನು ಮದುವೆ ಆಗುತ್ತಾನಾ? ಬ್ಯಾಂಕಿನ ಹಣ ಲೂಟಿ ಮಾಡ್ತಾನಾ? ಇನ್ಸಪೆಕ್ಟರ್ ಕೈಗೆ ಸಿಗುತ್ತಾನಾ? ಈ ಎಲ್ಲ ಕ್ಲೈಮಾಕ್ಸ್ ಗೆ ಚಿತ್ರವನ್ನು ನೋಡಬೇಕು.
ಚಂದನ್ ರಾಜ್ ತನ್ನ ಕಣ್ಣಿನ ನೋಟ, ಮಾತಿನ ಶೈಲಿಯ ಮೂಲಕವೇ ಸೆಳೆಯುತ್ತಾರೆ. ಪೋಲಿಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಅಶ್ವಿನ್ ಹಾಸನ್ ಟೆರರ್ ಆಗಿ ನಟಿಸಿದ್ದಾರೆ. ನಾಯಕಿ ಮಹಾಲಕ್ಷ್ಮಿ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
ಶರ್ಮಿಳ ಚಂದ್ರಶೇಖರ್, ಸೂರ್ಯ ಕಿರಣ್, ಪ್ರಭು ಹೊಸದುರ್ಗ, ಟೈಗರ್ ಗಂಗ, ಜಗದೀಶ್, ರಾಘವೇಂದ್ರ, ವಿಶಾಲ್ ಪಾಟೀಲ್, ರವಿ ಸಾಲಿಯನ್, ಲೋಕೇಶ್ ಗೌಡ, ಭೀಷ್ಮ, ಸುಧೀನ್ ನಾಯರ್ ಮೊದಲಾದ ರಂಗಭೂಮಿ ಕಲಾವಿದರು ಚಿತ್ರದ ಅಗತ್ಯಕ್ಕೆ ತಕ್ಕಂತೆ ನಟಿಸಿದ್ದಾರೆ.
ಮನು ದಾಸಪ್ಪ ಕ್ಯಾಮೆರಾ ಸೊಗಸಾಗಿ ಮೂಡಿ ಬಂದಿದೆ. ವಿವೇಕ್ ಚಕ್ರವರ್ತಿ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. ರಗಡ್ ಸ್ಟೋರಿಯ ಚಿತ್ರ ಮಾಸ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
_______
Be the first to comment