ಥಗ್ ಲೈಫ್

ಕರ್ನಾಟಕದಲ್ಲಿ ಬಿಡುಗಡೆ ಆಗಲ್ಲ ‘ಥಗ್ ಲೈಫ್’ !

ಕಮಲ್ ಹಾಸನ್ ಅಭಿನಯದ ಚಿತ್ರ ‘ಥಗ್ ಲೈಫ್’ ನ್ನು ಕರ್ನಾಟಕದಲ್ಲಿ ಬಿಡುಗಡೆ  ಮಾಡುವುದಿಲ್ಲ ಎಂದು ವಿತರಕರು  ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಕರ್ನಾಟಕದಲ್ಲಿ ಥಗ್ ಲೈಫ್ ಚಿತ್ರವನ್ನು ಬಿಡುಗಡೆ ಮಾಡಲು ಆದೇಶಿಸಿದ  ನಂತರ, ವಿತರಕ ವೆಂಕಟೇಶ್ ಕಮಲಾಕರ್ ಕರ್ನಾಟಕದಲ್ಲಿ ಚಿತ್ರ ಬಿಡುಗಡೆ  ಮಾಡುವುದಿಲ್ಲ ಎಂದು ಹೇಳಿದ್ದಾರೆ.

‘ನಾನು ಕರ್ನಾಟಕ ವಿತರಣಾ ಹಕ್ಕನ್ನು ಖರೀದಿಸಿದೆ. ಆದರೆ  ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಮಾಡಲ್ಲ.  ತಮಿಳುನಾಡಿನಲ್ಲಿ ಬಿಡುಗಡೆಯಾಗಿದ್ದರೂ ಚಿತ್ರವು ಯಶಸ್ಸು ಕಂಡಿಲ್ಲ. ಒಟ್ಟು ಕಲೆಕ್ಷನ್ ವಿಷಯದಲ್ಲಿ ಯಾವುದೇ ಚಿತ್ರವು ಮೊದಲ ಎರಡು ವಾರಗಳ ಅದ್ಭುತ ಪ್ರದರ್ಶನ ಮುಖ್ಯ’ ಎಂದು ಅವರು ಹೇಳಿದ್ದಾರೆ.

ಕನ್ನಡ ಭಾಷೆ ತಮಿಳಿನಿಂದ ಹುಟ್ಟಿಕೊಂಡಿದೆ ಎಂಬ ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಲ್ಲಿ  ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಚಿತ್ರದ ಬಿಡುಗಡೆಯನ್ನು ಸ್ಥಗಿತಗೊಳಿಸಲಾಯಿತು. ರಾಜ್ಯದಲ್ಲಿ  ಚಿತ್ರವನ್ನು ಸ್ಥಗಿತಗೊಳಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಕರ್ನಾಟಕ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ರಾಜ್ಯದಲ್ಲಿ ಯಾವ ಚಿತ್ರ ಬಿಡುಗಡೆ ಆಗಬೇಕು ಅಥವಾ ಬೇಡ ಎಂಬುದನ್ನು ಕೆಲ ಗುಂಪುಗಳು ನಿರ್ಧರಿಸಲು ಆಗಲ್ಲ. ಇದಕ್ಕೆಲ್ಲಾ ರಾಜ್ಯ ಸರ್ಕಾರ ಅವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿತು.

ಕರ್ನಾಟಕ ಹೊರತುಪಡಿಸಿ  ಜೂನ್ 5ರಂದು ದೇಶಾದ್ಯಂತ ಥಗ್ ಲೈಫ್ ಬಿಡುಗಡೆಯಾಗಿ ಹೀನಾಯ ಸೋಲು ಕಂಡಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!