ಕನ್ನಡ ಸೇರಿದಂತೆ ಬೇರೆ ಭಾಷೆಯ ಧಾರಾವಾಹಿಗಳಲ್ಲಿ ನಟಿಸಿರುವ ಶರ್ಮಿಳಾ ಚಂದ್ರಶೇಖರ್ ಅವರಿಗೆ ಕಿಡಿಗೇಡಿಗಳು ಅಶ್ಲೀಲ ಫೋಟೋ ವೈರಲ್ ಮಾಡುವ ಬೆದರಿಕೆ ಹಾಕಿದ್ದಾರೆ.
ʼಸೀತೆʼ, ʼಪತ್ತೇದಾರಿ ಪ್ರತಿಭಾʼ, ʼಅಂತರಪಟʼ ಧಾರಾವಾಹಿ ಖ್ಯಾತಿಯ ನಟಿ ಶರ್ಮಿಳಾ ಚಂದ್ರಶೇಖರ್ ಅವರು ವಿಡಿಯೋ ಮಾಡಿ ಎಲ್ಲರಿಗೂ ಎಚ್ಚರಿಕೆ ಕೊಟ್ಟಿದ್ದಾರೆ.
“ಇತ್ತೀಚೆಗೆ ಆನ್‌ಲೈನ್ ಮೋಸ ಜಾಸ್ತಿ ಆಗಿದೆ. ವೇವ್‌ಕ್ಯಾಶ್ ಲೋನ್ ಆಪ್‌ನಿಂದ ನಿಮಗೆ ಸಾಲ ಮಂಜೂರು ಆಗಿದೆ. ನೀವು ಸಾಲ ತೀರಿಸಿಲ್ಲ ಅಂದ್ರೆ ಫೋಟೋವನ್ನು ಬಳಸಿಕೊಂಡು ಅಶ್ಲೀಲವಾಗಿ ಎಡಿಟ್ ಮಾಡಿ ಎಲ್ಲ ವಾಟ್ಸಪ್ ಬಳಕೆದಾರರಿಗೂ ಕಳಿಸ್ತೀವಿ ಅಂತ ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ಸೋಶಿಯಲ್ ಮೀಡಿಯಾದಲ್ಲಿ ಎಡಿಟ್ ಆಗಿರುವ ಅಶ್ಲೀಲ ನನ್ನ ಫೋಟೋಗಳು ಕಂಡರೆ ಅದು ನನ್ನ ನಿಜವಾದ ಫೋಟೋ ಆಗಿರೋದಿಲ್ಲ. ದಯವಿಟ್ಟು ನಿಮಗೂ ಕೂಡ ಈ ರೀತಿ ಮೆಸೇಜ್, ಕಾಲ್ ಬಂದರೆ ರಿಪೋರ್ಟ್ ಮಾಡಿ. ಮೋಸ ಹೋಗಬೇಡಿ” ಎಂದು ಹೇಳಿದ್ದಾರೆ.
https://www.instagram.com/share/reel/_fMQ0Zsw-
ಶರ್ಮಿಳಾ ಚಂದ್ರಶೇಖರ್ ಅವರು ಇತ್ತೀಚೆಗೆ ʼಅಂತರಪಟʼ ಧಾರಾವಾಹಿಯಲ್ಲಿ ನಟಿಸಿದ್ದರು. ಅಮಲಾ ಎನ್ನುವ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರು ಒಳ್ಳೆಯ ಪಾತ್ರದ ನಿರೀಕ್ಷೆಯಲ್ಲಿದ್ದಾರೆ.

Be the first to comment