‘ತಿಥಿ’ ಹೀರೋ ಈಗ ದಿನಗೂಲಿ ಕೆಲಸಗಾರ!

ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಿತ್ರ   ‘ತಿಥಿ’ ಯಲ್ಲಿ ಹೀರೊ ಆಗಿ ನಟಿಸಿದ್ದ ಅಭಿಷೇಕ್  ಸಿನಿಮೇತರ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.

‘ತಿಥಿ’ ಚಿತ್ರದಲ್ಲಿ ಹೀರೊ ಆಗಿ  ಬಳಿಕ   2 ಚಿತ್ರಗಳಲ್ಲಿ ನಟಿಸಿದ್ದ ಅಭಿಷೇಕ್ ಬಳಿಕ ಚಿತ್ರರಂಗದಿಂದ ನಾಪತ್ತೆಯಾಗಿದ್ದರು. ಕೆಲ ವರ್ಷಗಳ ಬಳಿಕ ಮತ್ತೆ ಕ್ಯಾಮೆರಾ ಕಣ್ಣಿಗೆ ಬಿದ್ದಿರುವ ಅಭಿಷೇಕ್  ಈಗ ಮರ ಹೊರುವ ಕೆಲಸ ಮಾಡುತ್ತಿದ್ದಾರೆ.

ಸಕ್ಕರೆ ನಾಡು ಕೆಂಪ ಎನ್ನುವವರು ಈ ಬಗ್ಗೆ  ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ತಾನು ದಿನಗೂಲಿ ಕೆಲಸ ಮಾಡುತ್ತಿರುವುದಾಗಿ ಅಭಿ ಹೇಳಿದ್ದಾರೆ.

9 ವರ್ಷಗಳ ಹಿಂದೆ ತೆರೆಗೆ ಬಂದಿದ್ದ ‘ತಿಥಿ’ ಸಿನಿಮಾ ದಾಖಲೆ ಬರೆದಿತ್ತು. ಸಣ್ಣ ಹಳ್ಳಿಯಲ್ಲಿ ನಡೆಯುವ ಸಿಂಪಲ್ ಕಥೆ  ಸಿನಿಮಾ ಪ್ರೇಕ್ಷಕರ ಸೆಳೆದಿತ್ತು.   ಮಂಡ್ಯ ಜಿಲ್ಲೆಯ ಹಳ್ಳಿಗಳ ವೃತ್ತಿಪರರಲ್ಲದ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದರು.

ಚಿತ್ರದಲ್ಲಿ ಅಭಿ ಹಾಗೂ ಕಾವೇರಿಯ ಸಣ್ಣ ಲವ್ ಟ್ರ್ಯಾಕ್   ಇತ್ತು. ಅಭಿ ಆಗಿ ಮಂಡ್ಯದ ಸುಣ್ಣದಕೊಪ್ಪಲು ಗ್ರಾಮದ ಅಭಿಷೇಕ್ ಹೆಚ್‌. ಎನ್ ನಟಿಸಿದ್ದರು. ಕಾವೇರಿಯಾಗಿ ಪೂಜಾ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಳಿಕ  ಬಳಿಕ ಬ್ಯಾಕ್ ಟು ಬ್ಯಾಕ್ 2 ಚಿತ್ರಗಳಲ್ಲಿ ಅಭಿಷೇಕ್  ನಟಿಸಿದ್ದರು. ಬಳಿಕ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದ ಪೂಜಾ ಸದ್ಯ ಮದುವೆಯಾಗಿ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ.

ತಿಥಿ’ ಚಿತ್ರದಲ್ಲಿ ಗಡ್ಡಪ್ಪ ಪಾತ್ರದಲ್ಲಿ ನಟಿಸಿದ್ದ ಚೆನ್ನೇಗೌಡ ಇತ್ತೀಚೆಗೆ ನಿಧನರಾಗಿದ್ದರು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!