ಈ ವಾರ ತೆರೆಗೆ “ತಿರುಗ್ಸೋ ಮೀಸೆ”

ಶ್ರೀ ಶ್ರೀನಿವಾಸ ಮೂವೀಸ್ ಲಾಂಛನದಲ್ಲಿ ಶ್ರೀನಿವಾಸ್ ಹಾಗೂ ರಿಜ್ವಾನ್ ನಿರ್ಮಿಸಿರುವ “ತಿರುಗ್ಸೋ ಮೀಸೆ” ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಕರ್ನಾಟಕದಾದ್ಯಂತ ಸುಮಾರು ಮೂವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಕೃಷ್ಣ ವಿಜಯ್ ಎಲ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸುರೇಶ್ ಬೊಬ್ಬಿಲಿ ಸಂಗೀತ ನೀಡಿದ್ದಾರೆ. ಐದು ಹಾಡುಗಳು ಈ ಚಿತ್ರದಲ್ಲಿದೆ. ವಿ.ಮನೋಹರ್, ರಾಘವೇಂದ್ರ ಕಾಮತ್, ಆರ್ ಚಂದ್ರಶೇಖರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ.

ಅನುರಾಧಾ ಭಟ್, ಅನಿರುದ್ದ್, ವ್ಯಾಸರಾಜ್, ಚೇತನ್ ನಾಯಕ್, ಮೇಘನಾ ಕುಲಕರ್ಣಿ ಜೋಷಿ ಹಾಗೂ ಮಾಸ್ಟರ್ ಕುಶಾಲ್ ಸೇನಾಪತಿ ಮುಂತಾದವರ ಕಂಠಸಿರಿಯಲ್ಲಿ ಈ ಹಾಡುಗಳು ಮೂಡಿಬಂದಿದೆ.
ಸಿದ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ ಈ ಚಿತ್ರಕ್ಕಿದೆ.

ಶ್ರೀ ವಿಷ್ಣು ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ನಿಕ್ಕಿ ತಂಬೋಲಿ. ರೋಹಿಣಿ, ಶ್ರೀಕಾಂತ್ ಅಯ್ಯಂಗಾ ರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!