ಸಿನಿಮಾ ಮೇಲೆ ಪ್ರೀತಿ, ವ್ಯಾಮೋಹ ಇದ್ದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಒಂದು ನಿದರ್ಶನವೇ ಅದೇ “ದಿ ಪೇಂಟರ್” ಲ್ಯಾಬ್ ೧೯ ಹೊಸ ಚಿತ್ರ, ಅಮೃತ ಫಿಲಂ ಸೆಂಟರ್ ನ ೧೦ನೇ ಕಾಣಿಕೆ ಅದೇ “ದಿ ಪೈಂಟರ್” ವೆಂಕಟ ಭರದ್ವಾಜ್ ನಟಿಸಿ ನಿರ್ದೇಶಿಸಿರುವ ಚಿತ್ರ ದಿ ಪೈಂಟರ್. ಲಕ್ಡೌನ್ ಸಂಧಿಗ್ದ ಪರಿಸ್ಥಿತಿ ಯಲ್ಲಿ ಸಮಯವನ್ನು ಹಾಳುಮಾಡದೆ ಒಂದು ಅದ್ಭುತ ಪ್ರಯತ್ನವಾಗಿ ಹೊರಬಂದ ಚಿತ್ರವೇ ಅದೇ ದಿ ಪೈಂಟರ್.
ಈ ಲೊಕ್ಡೌನ್ ಸಂಧರ್ಭದಲ್ಲಿ ನಾನು ಸುಮಾರು ೨ ಕಥೆ ಮಾಡಿದೆ , ಆದ್ರೂ ಇನ್ನು ಏನೋ ಮಾಡಬೇಕು ಎಂಬ ತವಕ, ಯಾಕೆ ಒಂದು ಚಲನಚಿತ್ರ ಮಾಡಬಾರದು ಎಂಬ ಮೆದುಳಿನ ಚಕ್ರ ಜೋರಾಗಿ ತಿರುಗತೊಡಗಿತು ಆಗ ಹುಟ್ಟಿದು “ದಿ ಪೈಂಟರ್” ಇಂದಿನ ಲೊಕ್ಡೌನ್ ಪರಿಸ್ಥಿತಿ ಗೆ ತಕ್ಕಂತೆ ಒಂದು ಚಾಲೆಂಜಿಂಗ್ ಸಬ್ಜೆಕ್ಟ್ ರೆಡಿ ಮಾಡಿದೆ. ಆಗ ಅದು ಏಪ್ರಿಲ್ ಮೊದಲ ವಾರ , ಇವತ್ತಿನ ಪರಿಸ್ಥಿತಿ ಹೇಗೆ ಕೆಲವರು ಒಳ್ಳೆದಿಕ್ಕೆ ಕೆಲವರು ಹೇಗೆ ಕೆಟ್ಟದಕ್ಕೆ ಉಪಯೋಗಿಸುತ್ತಾರೆ ಮತ್ತು ಪ್ರಯತ್ನಿಸುತ್ತಾರೆ ಎಂಬುದನ್ನ “ದಿ ಪೈಂಟರ್” ನಲ್ಲಿ ನಾನು ಹೇಳಿದ್ದೀನಿ.
ಇದು ಒಂದು ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಕಥಾ ವಸ್ತು ಹೊಂದಿದ ಹಂದರ. ಏಪ್ರಿಲ್ ೨ನೇ ವಾರ ದಿಂದ ೧೦ ದಿನಗಳ ಶೂಟಿಂಗ್ , ಸುಮಾರ್ ೯೦ ನಿಮಿಷದ ಫೀಚರ್ ಚಿತ್ರ, ೫ ಲೊಕೇಶನ್ , ೫ ಜನ ಕ್ಯಾಮರಾಮನ್ , ೧೭ ಜನ ನಟರು ಮತ್ತು ತಂತ್ರಜ್ಞರು , ಚೆನ್ನೈ , ಬೆಂಗಳೂರು, ಕನಕಪುರ, ಹೆಬ್ಬಾಳ, ತುಮಕೂರ ನಲ್ಲಿ ಶೂಟಿಂಗ್ ಇದೆಲ್ಲ ಸಾಧ್ಯವಾಯಿತು. ಒಳ್ಳೆ ಯೋಜನೆಗೆ ನಮ್ಮ ತಂಡ ನನಗೆ ಕೈ ಜೋಡಿಸಿತು.
ಎಲ್ಲಾ ನಟರು ಮತ್ತು ತಂತ್ರಜ್ಞರು ತಮ್ಮ ಕೆಲಸಕ್ಕೆ ಒಳ್ಳೆ ನ್ಯಾಯ ಒದಗಿಸಿದ್ದಾರೆ, ದಿನಕ್ಕೆ ಮಲ್ಟಿಪಲ್ ಲೊಕೇಶನ್ ಶೂಟ್ ಮಾಡಲು ದೊಡ್ಡ ಗುಂಡಿಗೆ ಬೇಕು ಅದು ಈ ಪರಿಸ್ಥಿತಿ ಯಲ್ಲಿ, I Believed VIrutal Utilized VIrtually …. ಶಾಟ್ ಗಳ ಚಿತ್ರೀಕರಣ ವದ ಬಳಿಕ ಅದನ್ನು Mother Location ಗೆ ಕಳಿಸಿ (ಹಬ್ ಗೆ ಕಳಿಸಿ ) ಆ ಶಾಟ್ ನೋಡಿ ಸರಿ ಇದೆಯಾ ಎಂದು ಪರಿಗಣಿಸಲಾಗುತ್ತಿತ್ತು , like HUB and SPOKE Model IT ನಲ್ಲಿ ಉಪಯೋಗಿಸುವ ವಿಧಾನ ನಾನು ಇಲ್ಲಿ ಪ್ರಯೋಗಿಸಿದೆ. ಈ ಚಿತ್ರದಲ್ಲಿ ಎಲ್ಲ ನಟರು ತಂತ್ರಜ್ಞರು ಎಲ್ಲ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ , ಲೈಟ್ ಬಾಯ್, ಕಾಸ್ಟ್ಯೂಮ್ಸ್, makeup, ಆರ್ಟ್ಸ್ ನಲ್ಲಿ
ನನ್ನ ಬಳಿ ೨ ಲೈಟ್ ಇತ್ತು ಆದರೆ ಅದಕ್ಕೆ ಇನ್ನು ಕೆಲವು ಲೈಟ್ ನ ಅವಶ್ಯಕತೆ ಕಾಣುತ್ತಿತ್ತು ಅಗ ನಮ್ಮ ಮನೆಯಲ್ಲಿ ಇರುವ ಸೆಟ್ ಪ್ರಾಪ್ಸ್ ಉಪಯೋಗಿಸಿ ಬಿದಿರು ಕಡ್ಡಿ, ಹಗ್ಗ, ಬಲ್ಬ್ ಮತ್ತು ಎಲೆಕ್ಟ್ರಿ ವೈರ್ ನ ಕನೆಕ್ಟ್ ಸುಮಾರು ೨ ಲೈಟ್ ಮಾಡಿದೀವಿ , ಇಲ್ಲಿ ಪ್ರತಿಯೊಂದು ಹೆಜ್ಜೆಯು ಒಂದು ಚಾಲೆಂಜ್. ಅದು ನಮಗೆ ತುಂಬಾ ಖುಷಿ ಕೊಟ್ಟಿತು. ಯಾವ ರೀತಿಯು compromise ಆಗದೆ ನಾನು ಕಥೆಗೆ ಏನು ಬೇಕೋ ಅದು ತುಂಬಿದ್ದೇನೆ.
ಶೂಟಿಂಗ್ ಸಮಯದಲ್ಲಿ ನಾವುಗಳೇ ಸುಮಾರು ಮಧ್ಯಾಹ್ನ ೧ ದರಿನ್ದ ೩ ಗಂಟೆ ಬ್ರೇಕ್ ತೆಗೆದುಕೊಂಡು ನಾವೇ ಅಡುಗೆ ಮಾಡಿ ಊಟಾ ಮಾಡಿ ಆಮೇಲೆ ಶೂಟ್ ಶುರುಮಾಡಿದ್ದೀವಿ. ಒಂದು ಒಳ್ಳೆ lockdown ಅನುಭವದ ಚಿತ್ರ ಪೈಂಟರ್. ನಮ್ಮ ಮನೆಗಳ ಇಂಟರ್ನೆಟ್ ಕನೆಕ್ಷನ್ ನಾವು ದಿನ ನಿತ್ಯ ಸುಮಾರು ೭೦ GB ಡೇಟಾ ವಿಡಿಯೋ ಮತ್ತು ಸೌಂಡ್ ಕಂಟೆಂಟ್ ಅನ್ನು ಒಂದು ಜಾಗದಿಂದ ಟ್ರಾನ್ಸ್ಫರ್ ಮಾಡುತ್ತಿದ್ವಿ , ಆ ದಿನದ ಶೂಟ್ ಮಾಡಿದ್ದ ಚಿತ್ರಗಳನ್ನು ಮತ್ತು ಧ್ವನಿ ಗ್ರಹಿಸಿದ ಫೈಲ್ ಗಳನ್ನೂ ಇಂಡೆಕ್ಸ್ ಮಾಡಿ ಅದನ್ನು ಹಾರ್ಡ್ ಡಿಸ್ಕ್ ಗೆ ಕಾಪಿ ಮಾಡಿ ಅಫ್ಲಿನ್ ಕನ್ವರ್ಷನ್ ಮಾಡಿ ಅದನ್ನು ಎಡಿಟಿಂಗ್ ರಿಪೋರ್ಟ್ ಗೆ ರೆಡಿ ಮಾಡುತ್ತಿದ್ವಿ. ಇದೆಲ್ಲ ಒಂದು ಒಳ್ಳೆ ಚಾಲೆಂಜಿಂಗ್ ಅನುಭವ.
ಒಂದು ಒಳ್ಳೆ ಅನುಭವ, ಮನೆಯಲ್ಲಿ ೫ ಜನ ಅಷ್ಟೇ, ಎಲ್ಲರೂ ಆ ಶಾಟ್ ನಲ್ಲಿ ಆಕ್ಟ್ ಮಾಡಬೇಕು , ಅವರೇ ಕ್ಯಾಮೆರಾ ಮುಂದೆ ಆಕ್ಟ್ ಮಾಡಬೇಕು ಆಗ ಅವರೇ ಕ್ಯಾಮೆರಾ ಮತ್ತು ಸೌಂಡ್ ರೋಲ್ ಮಾಡಿ ಕ್ಯಾಮೆರಾ ಮುಂದೆ ಬಂದು ನಿಂತು ಸುಮಾರು ೫ ಸೆಕೆಂಡ್ ಬಿಟ್ಟು ಆಕ್ಷನ್ ಹೇಳಿದ ನಂತರ ನಟನೆ ಶುರು ಮಾಡಬೇಕು . ಶಾಟ್ ಮುಗಿದ ನಂತರ ೫ ಸೆಕೆಂಡ್ lag ಮಾಡಿ ಕಟ್ ಹೇಳಬೇಕು… ಇದೆಯಲ್ಲ ಒಂದು ಒಳ್ಳೆ ಚಾಲೆಂಜ್. ಸಧ್ಯಕ್ಕೆ ಚಿತ್ರೀಕರಣ ಮುಗಿದು ಅದು ಎಡಿಟಿಂಗ್ ಟೇಬಲ್ ನಮ್ಮ ಎಡಿಟರ್ ಚಂದನ್ ರೆಡಿ ಮಾಡುತ್ತಿದ್ದಾರೆ.
ಸುಮಾರು ಜೂನ್ ಮೊದಲ ವಾರದಲ್ಲಿ ಚಿತ್ರ ಸಂಪೂರ್ಣ ತಯಾರಾಗಲಿದೆ. ಇದು ಲೊಕ್ಡೌನ್ ಇತಿಹಾಸದಲ್ಲಿ ನಡೆದ ಒಂದು ಕನ್ನಡ ಚಲನ ಚಿತ್ರ ಪ್ರಯೋಗ ಅಂತ ಹೇಳೋಕ್ಕೆ ಖುಷಿ ಆಗುತ್ತೆ. ಮಾಡ್ತೀನಿ ಅಂತ ಹೇಳೋದು ಬಿಟ್ಟು ನಾನು ಇಲ್ಲಿ ಮಾಡಿದ್ದೀನಿ ಅಂತ ಹೇಳೋಕ್ಕೆ ತುಂಬಾ ಖುಷಿ ಆಗುತ್ತೆ.
ನನ್ನ ಆಮ್ಲೆಟ್ ಚಿತ್ರ ಮುಗಿದು ತೆರೆಗೆ ಬರಲು ಸಿದ್ಧವಾಗಿದೆ , ಎಲ್ಲಾ ದೇವರ ಕೃಪೆ ಆಶೀರ್ವಾದ ಆದರೆ ಈ ವರ್ಷ ನನ್ನ ೨ ಚಿತ್ರ ತೆರೆಗೆ ಬರುತ್ತದೆ. ತಾರಾಗಣ
ವೆಂಕಟ್ ಭರದ್ವಾಜ್ ,ರಾಜ್ ಕಮಲ್ ,mohd ಭಾಷಾ,
ನವೀನ್ ಪ್ರಸಾದ್,ಕಬೀರ್ ಸೋಮಯಾಜಿ,ಶಮೀಕ್ ,ಉಮಾ ,ಶಮಾ ವೈಷ್ಣವಿ, ವೆಂಕಟ್ ಶಾಸ್ತ್ರಿ,
ಮನೋಜ್, ಕಿರಣ್ ,ಮಿಥುನ್ ಸಂಜಯ್ ಮುಂತಾದವರು ಅಭಿನಯಿಸಿದ್ದಾರೆ.
ಕಥೆ, ಚಿತ್ರಕಥೆ ,ಸಂಭಾಷಣೆ ಹಾಗೂ ನಿರ್ದೇಶನ ವೆಂಕಟ್ ಭಾರದ್ವಾಜ್. ಕ್ಯಾಮೆರಾ ಹಾಗೂ ಸೌಂಡ್ ಶಮೀಕ್ , ಸಂಜಯ್ , ಮಣಿ , ವೆಂಕಟೇಶ್ ಶಾಸ್ತ್ರಿ , ಕಬೀರ್ ಸೋಮಯಾಜಿ ಮಾಡಿದ್ದಾರೆ. ಸಂಕಲನ colorist ಚಂದನ್. ಪಿ, ಸೋಶಿಯಲ್ ಮೀಡಿಯಾ ಮನೋಜ್ ವಿ ಮತ್ತು ಕಿರಣ್, ವಿನ್ಯಾಸ ಮಿಥುಮ್ ಟಿ.ಎಂ. ನಿರ್ವಹಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ ವೆಂಕಟ್ ಭಾರದ್ವಾಜ್ ಚಿತ್ರದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ.
Pingback: DevOps Outsourcing Model
Pingback: tree service company Jamesville