ಆಂಧ್ರ, ತೆಲಂಗಾಣದಲ್ಲಿ ಚಿತ್ರಮಂದಿರಗಳು ಬಂದ್

ಜೂನ್ 1 ರಿಂದ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 1500 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಂದ್ ಆಗಲಿವೆ.

ಆಂಧ್ರ ಮತ್ತು ತೆಲಂಗಾಣಗಳಲ್ಲಿ  ಚಿತ್ರಮಂದಿರಗಳು ಬಾಡಿಗೆ ಆಧಾರದಲ್ಲಿ ಕೆಲಸ ಮಾಡುತ್ತಿವೆ. ನಿರ್ಮಾಪಕರು, ಚಿತ್ರಮಂದಿರಗಳಿಗೆ ನಿಗದಿತ ಬಾಡಿಗೆ ಮೊತ್ತ ನೀಡಿ  ಸಿನಿಮಾಗಳನ್ನು ಪ್ರದರ್ಶಿಸುತ್ತಾರೆ. ಸಿನಿಮಾ ಪ್ರದರ್ಶನದಿಂದ ಬಂದ ಲಾಭವನ್ನು ಪೂರ್ಣವಾಗಿ ನಿರ್ಮಾಪಕ ಅಥವಾ ವಿತರಕ  ಇರಿಸಿಕೊಳ್ಳುತ್ತಾರೆ. ಇದೀಗ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಚಿತ್ರಮಂದಿರಗಳ ಮಾಲೀಕರು ತಮಗೂ  ಸಿನಿಮಾದ ಒಟ್ಟು ಕಲೆಕ್ಷನ್​ನಲ್ಲಿ ಭಾಗ ಬೇಕು ಎಂದು ಬೇಡಿಕೆ ಇರಿಸಿದ್ದಾರೆ.

ಚಿತ್ರಮಂದಿರಗಳ ಮಾಲೀಕರು ಇನ್ನು ಮುಂದೆ ನಾವು ಬಾಡಿಗೆ ಆಧಾರದಲ್ಲಿ ಸಿನಿಮಾ ಪ್ರದರ್ಶಿಸುವುದಿಲ್ಲ ಪರ್ಸೆಂಟೇಜ್ ಲೆಕ್ಕದಲ್ಲಿ ಸಿನಿಮಾ ಪ್ರದರ್ಶಿಸುತ್ತೇವೆ ಎಂದಿದ್ದಾರೆ.  ಇದಕ್ಕೆ ತೆಲುಗು ಸಿನಿಮಾ ನಿರ್ಮಾಪಕರು ಒಪ್ಪಿಲ್ಲ. ಮೇ 18 ರಂದು ಈ ಬಗ್ಗೆ ಸಭೆ ನಡೆದಿದ್ದು ಸಭೆ ವಿಫಲವಾಗಿದೆ. ಚಿತ್ರಮಂದಿರಗಳ ಮಾಲೀಕರು ಪ್ರತಿಭಟನೆ ಘೋಷಣೆ ಮಾಡಿದ್ದಾರೆ.

ಪವನ್ ಕಲ್ಯಾಣ್ ​ ನಟನೆಯ ‘ಹರಿ ಹರ ವೀರ ಮಲ್ಲು’, ವಿಜಯ್ ದೇವರಕೊಂಡ ನಟನೆಯ ‘ಕಿಂಗ್​ಡಮ್’ ಸೇರಿದಂತೆ  ಹಲವಾರು ಸಿನಿಮಾಗಳು ಜೂನ್ ತಿಂಗಳ ಮೊದಲ ವಾರದಲ್ಲಿ ಬಿಡುಗಡೆ ಆಗಲಿವೆ.  ಈ ಸಿನಿಮಾಗಳಿಗೆ ತೀವ್ರ ಸಂಕಷ್ಟ ಎದುರಾಗಲಿದೆ.

ಈ ಬಗ್ಗೆ ನಿರ್ಮಾಪಕರ ಸಂಘ  ಹಾಗೂ ಪ್ರದರ್ಶಕರ ಸಂಘದೊಂದಿಗೆ ಪ್ರತ್ಯೇಕ ಸಭೆ ನಡೆಸುವುದಾಗಿ ತೆಲುಗು ಸಿನಿಮಾ ಚೇಂಬರ್​  ಹೇಳಿದೆ. ಈ ವಿಷಯ ಕುರಿತಂತೆ ಸಿನಿಮಾ ನಿರ್ಮಾಪಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳಬೇಕು ಎಂದಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!