ಥಿಯೇಟರ್​ನಲ್ಲಿ ದಿ ವಿಲನ್​​ ಟಿಕೆಟ್​ ಬೆಲೆ 200ರೂ.

ಕಿಚ್ಚ ಸುದೀಪ್ ಹಾಗು ಡಾ.ಶಿವರಾಜ್​ಕುಮಾರ್​ ಅಭಿನಯದ ದಿ ವಿಲನ್​ ಸಿನಿಮಾ ಕ್ರೇಜ್​ ಎಷ್ಟಿದೆ ಅಂದ್ರೆ, ಯಾವಾಗ ಸಿನಿಮಾದ ಟಿಕೆಟ್​ ಆನ್​ಲೈನ್​ ಬುಕ್ಕಿಂಗ್ಸ್​ ಶುರುವಾಗುತ್ತೋ, ಅಂತಾ ಕಾಯ್ತಾ ಇದ್ದಾರೆ ಫ್ಯಾನ್ಸ್​​. ಆದ್ರೆ ದಿ ವಿಲನ್ ಸಿನಿಮಾ ನೋಡ್ಬೇಕು ಅಂತಿರೋರು ಚೂರು ಹೆಚ್ಚೇ ಖರ್ಚು ಮಾಡ್ಬೇಕಾಗುತ್ತೆ. ದಿ ವಿಲನ್​ ಸಿನಿಮಾ ನೋಡ್ಬೇಕು ಅಂದ್ರೆ ಥಿಯೇಟರ್​ನಲ್ಲಿ ಬರೊಬ್ಬರಿ 200 ರೂಪಾಯಿಗಳನ್ನ ಕೊಡ್ಬೇಕು. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಸಿಂಗಲ್​ ಸ್ಕ್ರೀನ್​ ಥಿಯೇಟರ್​ಗಳಲ್ಲಿ ಬಾಲ್ಕನಿ ಟಿಕೆಟ್​ ಒಂದರ ಬೆಲೆ 100ರಿಂದ 120ರೂಪಾಯಿ ಇದೆ. ಆದ್ರೆ ದಿ ವಿಲನ್​ ಸಿನಿಮಾ ನೋಡ್ಬೇಕು ಅಂದ್ರೆ ದುಪ್ಪಟ್ಟು ಹಣ ಕೊಡ್ಬೇಕು. ಇನ್ನು ಸೆಕೆಂಡ್​​ ಕ್ಲಾಸ್​ ಟಿಕೆಟ್​ ದರ ಕೂಡ ಹೆಚ್ಚಿರಲಿದೆ. ಇದನ್ನ ಹೊರತು ಪಡಿಸಿ ಸಣ್ಣ ಪುಟ್ಟ ಪಟ್ಟಣಗಳಲ್ಲಿ ಇರೋ ಥಿಯೇಟರ್​ಗಳಲ್ಲೂ ಟಿಕೆಟ್​ನ ಬೆಲೆ ಡಬಲ್ ಆಗಲಿದೆ. ಈಗಾಗ್ಲೆ ಮಲ್ಟಿಫ್ಲೆಕ್ಸ್​​ನಲ್ಲಿ ಟಿಕೆಟ್​ನ ಬೆಲೆ 1000 ರೂಪಾಯಿ ಅಂತ ಸಿನಿಮಾ ಟೀಮ್​ ಹೇಳಿಕೊಂಡಿತ್ತು.

ಪರಭಾಷಾ ಸಿನಿಮಾಗಳಿಗೆ 500, 100 ರೂಪಾಯಿ ಟಿಕೆಟ್​ ಬೆಲೆ ಮಾಡಿದ್ರು ಕೊಟ್ಟು ನೋಡೋ ಪ್ರೇಕ್ಷಕರು, ಪರಭಾಷಾ ಸಿನಿಮಾಗಳಿಗೆ ಯಾವುದ್ರಲ್ಲೂ ಕಡಿಮೆ ಇಲ್ಲ ಅನ್ನೋ ಹಾಗೆ ಮಾಡಿರೋ, ದಿ ವಿಲನ್​​​​​​​​ ಸಿನಿಮಾ ನೋಡೋದಿಲ್ವಾ? ಹಾಗಾಗಿ ಟಿಕೆಟ್​ ಬೆಲೆ ಹೆಚ್ಚು ಮಾಡಿರೋದು ಸೂಕ್ತ ಅನ್ನಿಸುತ್ತೆ ಅಂದಿದ್ದಾರೆ ನಿರ್ದೇಶಕ ಪ್ರೇಮ್. ನಿರ್ಮಾಪಕ ಸಿ.ಆರ್​.ಮನೋಹರ್​ ಕೂಡ ಸಿನಿಮಾದ ಬಜೆಟ್ ಈಗ ಬರ್ತಾ ಇರೋ ಕನ್ನಡ ಸಿನಿಮಾಗಳ ಬಜೆಟ್​ಗೆ ಹೋಲಿಸಿದ್ರೆ ತುಂಬಾನೇ ಹೆಚ್ಚಿದೆ. ಹಾಗಾಗಿ ಟೆಕೆಟ್​ ಬೆಲೆ ಹೆಚ್ಚಿಸಲಾಗಿದೆ. ಇದನ್ನ ಕನ್ನಡ ಸಿನಿಪ್ರೇಕ್ಷಕ ಅರ್ಥ ಮಾಡಿಕೊಳ್ತಾನೆ ಅಂದಿದ್ದಾರೆ. ಇದೇ ಅಕ್ಟೋಬರ್​ 11ರಿಂದ ಸಿನಿಮಾದ ಟಿಕೆಟ್​ಗಳು ಆನ್​ಲೈನ್​​​ ಲಭ್ಯವಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!