ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ “ದಿ ವಿಲನ್” ಚಿತ್ರದ ಎರಡನೇ ಹಾಡು ರಿಲೀಸ್ ಆಗಿದ್ದು ,
ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್ ಶಿವಣ್ಣನ ನಾನ್ ಸೈಲೆಂಟಾಗಿದ್ರೆ ರಾಮ, ವೈಲೆಂಟ್ ಆದ್ರೆ ರಾವಣ ಎನ್ನುವ ಲಿರಿಕ್ಸ್ ನಿಂದ ಶುರುವಾಗುವ ಈ ಹಾಡಿನ ಸಾಹಿತ್ಯವನ್ನು ನಿರ್ದೇಶಕ ಪ್ರೇಮ್ ಬರೆದಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ತ್ರಿಮೂರ್ತಿ ಗಳಾದ ಜೋಗಿ ಪ್ರೇಮ್, ಕೈಲಾಶ್ ಕೇರ್ ಹಾಗೂ ವಿಜಯ್ ಪ್ರಕಾಶ್ ಮೂವರು ಹಾಡಿಗೆ ಧ್ವನಿಯಾಗಿದ್ದಾರೆ. ಈಗಾಗಲೇ “ದಿ ವಿಲನ್” ಚಿತ್ರದ ಟೈಟಲ್ ಸಾಂಗ್ ರಿಲೀಸ್ ಆಗಿ ಒಂದು ಗಂಟೆಯಲ್ಲಿ 1 ಲಕ್ಷಕ್ಕ ಅಧಿಕ ವ್ಯೂ ಪಡೆದುಕೊಂಡಿದೆಯಂತೆ. ಸಿನಿಮಾದ ಸದ್ದು ಎಲ್ಲೆಡೆ ಜೋರಾಗಿದ್ದು , ಅತಿ ಶೀಘ್ರದಲ್ಲಿ ಬೆಳ್ಳಿ ಪರದೆಯ ಮೇಲೆ ಬರಲಿದೆ.
https://youtu.be/UCTB_MEXw2c





Be the first to comment