ದಿ ಟಾಸ್ಕ್

Movie Review: ಮೆಡಿಕಲ್ ಮಾಫಿಯಾದ ಕರಾಳ ಅನಾವರಣ ‘ದಿ ಟಾಸ್ಕ್’

ಚಿತ್ರ: ದಿ ಟಾಸ್ಕ್
ನಿರ್ದೇಶನ: ರಾಘು ಶಿವಮೊಗ್ಗ
ನಿರ್ಮಾಣ: ವಿಜಯ್ ಕುಮಾರ್, ರಾಮಣ್ಣ
ತಾರಾ ಬಳಗ: ಜಯ ಸೂರ್ಯ, ಸಾಗರ್, ಅಚ್ಚುತ್ ಕುಮಾರ್, ಗೋಪಾಲ್ ಕೃಷ್ಣ ದೇಶಪಾಂಡೆ, ಶ್ರೀ ಲಕ್ಷ್ಮಿ, ಅರವಿಂದ್ ಕುಪ್ಪಳಿಕರ್, ಮನೋಹರ್ ಇತರರು
ರೇಟಿಂಗ್: 3.5

ವೈದ್ಯಕೀಯ ಲೋಕದಲ್ಲಿ ನಡೆಯುವ ಮಾಫಿಯಾವನ್ನು ಥ್ರಿಲ್ಲರ್ ಸಸ್ಪೆನ್ಸ್ ಅಂಶದೊಂದಿಗೆ ಇಂದಿನ ಕಾಲಘಟ್ಟಕ್ಕೆ ಹೊಂದುವಂತೆ ಕಮರ್ಷಿಯಲ್ ಆಗಿ ತೆರೆಯ ಮೇಲೆ ತಂದಿರುವ ಚಿತ್ರ ದಿ ಟಾಸ್ಕ್.

ಚಿತ್ರದಲ್ಲಿ ಮೆಡಿಕಲ್ ಮಾಫಿಯಾ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ನಿರ್ದೇಶಕರು ಪ್ರೇಕ್ಷಕರ ಮುಂದೆ ಮನಮುಟ್ಟುವಂತೆ ತೆರೆದಿಟ್ಟಿದ್ದಾರೆ. ವೈಟ್ ಕಾಲರ್ ಕ್ರಿಮಿನಲ್ ಗಳ ಕ್ರಿಮಿನಲ್ ಕೆಲಸವನ್ನು ಸಿನಿಮೀಯ ಅಂಶಗಳೊಂದಿಗೆ ತೆರೆಯ ಮುಂದೆ ತರಲಾಗಿದೆ.

ವೈದ್ಯರುಗಳಿಂದ ರೋಗಿಗಳಿಗೆ ಸಮಸ್ಯೆ ಉಂಟಾದಾಗ ಸಿಡಿದೆಳುವ ಇಬ್ಬರು ಯುವಕರ ಪಾತ್ರದಲ್ಲಿ ಜಯಸೂರ್ಯ ಹಾಗೂ ಸಾಗರ್ ಕಾಣಿಸಿಕೊಂಡಿದ್ದಾರೆ. ಯುವಕರು ಯಾವ ರೀತಿ ಅನ್ಯಾಯದ ವಿರುದ್ಧ ಸಿಡಿದೆಳುತ್ತಾರೆ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.

ಜಯಸೂರ್ಯ ಹಾಗೂ ಸಾಗರ್ ಆಕ್ಷನ್ ದೃಶ್ಯಗಳ ಜೊತೆಗೆ ಎಮೋಷನಲ್ ಸನ್ನಿವೇಶನಗಳಲ್ಲೂ ಉತ್ತಮವಾಗಿ ನಟಿಸಿದ್ದಾರೆ. ಅಚ್ಚುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಶ್ರೀ ಲಕ್ಷ್ಮಿ ಇತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಾಘು ಶಿವಮೊಗ್ಗ ನಿರ್ದೇಶನದ ಜೊತೆಗೆ ಖಳನಾಯಕನಾಗಿಯೂ ಗೆದ್ದಿದ್ದಾರೆ.

ಮೆಡಿಕಲ್ ಮಾಫಿಯಾದ ಕರಾಳ ಮುಖಗಳನ್ನು ತಿಳಿದುಕೊಳ್ಳಲು ಈ ಚಿತ್ರವನ್ನು ನೋಡಬಹುದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!