“ದ ಸೂಟ್” ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.
ಚಿತ್ರ ಸಾಹಿತಿ ಡಾ||ವಿ.ನಾಗೇಂದ್ರ ಪ್ರಸಾದ್ ಹಾಗೂ ನೀರ್ ದೋಸೆ ನಿರ್ದೇಶಕರಾದ ವಿಜಯ್ ಪ್ರಸಾದ್, ನಿರ್ಮಾಪಕರು ನಾಗೇಶ್ ಕುಮಾರ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದರು.
ಇದು ನನ್ನ ನಿರ್ದೇಶನದ ಮೊದಲ ಚಿತ್ರ. ನಮ್ಮ ಚಿತ್ರದಲ್ಲಿ ನಾವು ಧರಿಸುವ ಸೂಟೇ ಪ್ರಮುಖ ಪಾತ್ರಧಾರಿ. ಸೂಟ್ ಗೆ ಅದರದೇ ಆದ ವಿಶೇಷತೆ ಇದೆ. ನ್ನದೇ ಆದ ಗತ್ತು ಇರುವ “ಸೂಟ್” ಬಗ್ಗೆ ನಮ್ಮ ಸಿನಿಮಾ ಕಥೆ ಇದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಚಿತ್ರದ ನಿರ್ದೇಶಕ ಎಸ್ ಭಗತ್ ರಾಜ್. ಮಾಲತಿ ಬಿ.ರಾಮಸ್ವಾಮಿ ಅವರು ಚಿತ್ರ ನಿರ್ಮಾಣ ಮಾಡಿದ್ದಾರೆ. ಆರು ಹಾಡುಗಳಿಗೆ ಕಿರಣ್ ಶಂಕರ್ ಸಂಗೀತ ನೀಡಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಕ, ಸುರೇಶ್ ಡಿ.ಹೆಚ್ ಸಂಕಲನಕಾರ ಆಗಿ ಕೆಲಸ ಮಾಡಿದ್ದಾರೆ.
ಧಾನ್ವಿ, ಸುಜಯ್ ಆರ್ಯ, ಕಮಲ್ (ಕಲಿಮ್ ಪಾಶಾ) ಮಂಜುನಾಥ್ ಪಾಟೀಲ್, ಭೀಷ್ಮ ರಾಮಯ್ಯ ದೀಪ್ತಿ ಕಾಪ್ಸೆ, ಡಾ||ವಿ.ನಾಗೇಂದ್ರ ಪ್ರಸಾದ್, ಗಡ್ಡ ವಿಜಿ, ಉಮೇಶ್ ಬಣಕಾರ್, ಸಿದ್ದಲಿಂಗು ಶ್ರೀಧರ್ , ಜೋಸೆಫ್ ಚಿತ್ರದ ತಾರಾಬಳಗದಲ್ಲಿದ್ದಾರೆ.
—–

Be the first to comment