ಸೈನಿಕನ ಕಥೆ

Kaalapatthar Movie Review: ಕಾಲಾಪತ್ತರ್ ಆಗುವ ಸೈನಿಕನ ಕಥೆ

ಚಿತ್ರ: ಕಾಲಾಪತ್ತರ್
ನಿರ್ದೇಶನ: ವಿಕ್ಕಿ ವರುಣ್
ನಿರ್ಮಾಣ: ನಾಗರಾಜ್ ಬಿಲ್ಲಿನಕೋಟೆ, ಭುವನ್ ಸುರೇಶ್
ತಾರಾಗಣ: ವಿಕ್ಕಿ ವರುಣ್, ಧನ್ಯ ರಾಮ್ ಕುಮಾರ್, ನಾಗಾಭರಣ, ರಾಜೇಶ್ ನಟರಂಗ ಇತರರು
ರೇಟಿಂಗ್: 3.5

ಸೈನ್ಯದಲ್ಲಿ ಅಡುಗೆ ಭಟ್ಟ ಆಗಿದ್ದವ ಭಯೋತ್ಪಾದಕರ ಜೊತೆಗೆ ಸೌಟು ಹಿಡಿದು ಹೋರಾಡಿ ತನ್ನ ಊರಿನಲ್ಲಿ ಆತನ ಶಿಲೆಯ ಮೂರ್ತಿ ಸ್ಥಾಪನೆಗೊಂಡಾಗ ಏನೆಲ್ಲಾ ಆಗುತ್ತದೆ ಎನ್ನುವ ಕಥೆ ಹೊಂದಿರುವ ಚಿತ್ರ ಕಾಲಾಪತ್ತರ್.

ಚಿತ್ರದ ನಾಯಕ ಶಂಕ್ರ ಉತ್ತರ ಕರ್ನಾಟಕದ. ಅಡುಗೆ ಭಟ್ಟ ಆಗಿ ಸೇನೆಯಲ್ಲಿರುವ ಈತನಿಗೂ ಸೈನಿಕರ ಜೊತೆ ಹೋರಾಡಬೇಕು ಎನ್ನುವ ಕನಸಿರುತ್ತದೆ. ಒಂದು ದಿನ ಅದಕ್ಕೆ ಅವಕಾಶವೂ ಸಿಗುತ್ತದೆ. ಭಯೋತ್ಪಾದಕರನ್ನು ಹೊಡೆದು ಹಾಕಿದ ಶಂಕ್ರ ನನ್ನ ಊರಿನಲ್ಲಿ ಹೀರೋ ಆಗುತ್ತಾನೆ. ನಂತರ ಆತನ ಶಿಲೆಯ ಮೂರ್ತಿ ಊರಿನಲ್ಲಿ ಪ್ರತಿಷ್ಠಾಪನೆ ಆಗುತ್ತದೆ. ನಂತರ ಆತನ ಜೀವನದಲ್ಲಿ ಆಗುವ ಬದಲಾವಣೆಗಳಿಗೆ ಚಿತ್ರವನ್ನು ನೋಡಬೇಕು.

ಚಿತ್ರದ ಕಥೆಯನ್ನು ಸತ್ಯ ಪ್ರಕಾಶ್ ಬರೆದಿರುವ ಕಾರಣ ಇಲ್ಲಿ ರಾಮಾ ರಾಮಾ ರೇ ಚಿತ್ರದ ಛಾಯೆ ಕಂಡು ಬರುತ್ತದೆ. ಚಿತ್ರದ ಕಥೆ ಭಿನ್ನ ಹಾಗೂ ಸಹಜವಾಗಿ ಮೂಡಿ ಬಂದಿದೆ.

ಸೈನಿಕನಾಗಿ ವಿಕ್ಕಿ ವರುಣ್ ನಟನೆ ಇಷ್ಟವಾಗುತ್ತದೆ. ಶಿಕ್ಷಕಿಯ ಪಾತ್ರದಲ್ಲಿ ನಟಿಸಿರುವ ಧನ್ಯ ರಾಮ್ ಕುಮಾರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಯತ್ನ ಮಾಡಿದ್ದಾರೆ. ಊರಿನ ಗೌಡರಾಗಿ ನಾಗಾಭರಣ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

ಸುದೀಪ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ಸಿನಿಮಾಗೆ ಪೂರಕ ಆಗಿದೆ. ಚಿತ್ರದಲ್ಲಿ ಪ್ರೀತಿಗೆ ಒಂದಷ್ಟು ಇನ್ನಷ್ಟು ಜಾಗ ಕೊಟ್ಟಿದ್ದರೆ, ಹಾಸ್ಯ ಇದ್ದಿದ್ದರೆ ಚಿತ್ರ ಇನ್ನಷ್ಟು ಲವ್ಲೀ ಅನಿಸುತ್ತಿತ್ತು.

ಸೈನಿಕನ ಕಥೆ

Be the first to comment

Leave a Reply

Your email address will not be published. Required fields are marked *

Translate »
error: Content is protected !!