ದಿ ಸಾಬರಮತಿ ರಿಪೋರ್ಟ್‌

‘ದಿ ಸಾಬರಮತಿ ರಿಪೋರ್ಟ್‌’ ಸಿನಿಮಾಗೆ ತೆರಿಗೆ ವಿನಾಯಿತಿ

ಗೋಧ್ರಾ ರೈಲು ಹತ್ಯಾಕಾಂಡ ಕಥೆಯ ‘ದಿ ಸಾಬರಮತಿ ರಿಪೋರ್ಟ್‌’ ಸಿನಿಮಾಗೆ ಮಧ್ಯಪ್ರದೇಶ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ.

‘ದಿ ಸಾಬರಮತಿ ರಿಪೋರ್ಟ್‌ ಒಂದು ಅತ್ಯುತ್ತಮ ಚಿತ್ರ. ನಾನು ಈ ಸಿನಿಮಾವನ್ನು ನೋಡಲು ಹೋಗುತ್ತಿದ್ದು, ನಮ್ಮ ಸರ್ಕಾರದ ಸಚಿವರು, ಶಾಸಕರು ಮತ್ತು ಸಂಸದರಿಗೂ ಸಿನಿಮಾ ನೋಡುವಂತೆ ಹೇಳಿದ್ದೇನೆ. ಸಿನಿಮಾ ಅತಿ ಹೆಚ್ಚು ಜನರನ್ನು ತಲುಪಲಿ ಎಂಬ ಉದ್ದೇಶದಿಂದ ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ‘ಈ ಘಟನೆ  ಗತಕಾಲದ ಕರಾಳ ಅಧ್ಯಾಯವಾಗಿದ್ದು,   ಚಿತ್ರದ ಮೂಲಕ ಸತ್ಯ ಹೊರಬೀಳಲಿದೆ’  ಎಂದು  ಮುಖ್ಯಮಂತ್ರಿ ಮೋಹನ್ ಯಾದವ್ ತಿಳಿಸಿದ್ದಾರೆ.

ದಿ ಸಾಬರಮತಿ ರಿಪೋರ್ಟ್‌

ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ, ‘ಸತ್ಯ ಹೊರಬರುತ್ತಿರುವುದು ಒಳ್ಳೆಯದು. ಸುಳ್ಳು ಕತೆಗಳಿಗೆ ಆಯಸ್ಸು ಕಡಿಮೆ. ಕ್ರಮೇಣವಾಗಿ ಸತ್ಯ ಹೊರಬರಲೇಬೇಕು’ ಎಂದು ಪೋಸ್ಟ್ ಮಾಡಿದ್ದಾರೆ.

ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ, ಕರಸೇವಕರಿದ್ದ ಸಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ ಗುಜರಾತ್‌ನ ಗೋಧ್ರಾದಲ್ಲಿ 2002ರ ಫೆಬ್ರುವರಿ 27ರಂದು ಬೆಂಕಿ ಹಚ್ಚಲಾಗಿತ್ತು. ಘಟನೆಯಲ್ಲಿ 59 ಕರಸೇವಕರು ಮೃತಪಟ್ಟಿದ್ದರು. ಈ ಘಟನೆ ರಾಜ್ಯದಲ್ಲಿ ಕೋಮು ಗಲಭೆಗೆ ಕಾರಣವಾಗಿ, 1,200ಕ್ಕೂ ಹೆಚ್ಚು ಜನ ಕೊಲ್ಲಲ್ಪಟ್ಟರು.

ಧೀರಜ್‌ ಸರ್ನಾ ನಿರ್ದೇಶನ, ’12th ಫೇಲ್‌’ ಖ್ಯಾತಿಯ ವಿಕ್ರಾಂತ್ ಮಾಸ್ಸಿ ನಟನೆಯ  ‘ದಿ ಸಾಬರಮತಿ ರಿಪೋರ್ಟ್‌’ ಸಿನಿಮಾ ನವೆಂಬರ್ 15ರಂದು ದೇಶದಾದ್ಯಂತ ಬಿಡುಗಡೆಗೊಂಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!