ಪ್ರಭಾಸ್ ನಟನೆಯ “ದಿ ರಾಜಾ ಸಾಬ್” ಸಿನಿಮಾ ಇದೇ ವರ್ಷದ ಡಿಸೆಂಬರ್ 5ರಂದು ತೆರೆಗೆ ಬರಲಿದೆ.
ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ರಿಲೀಸ್ ಆಗುತ್ತಿರುವ ಈ ಚಿತ್ರದ ಟೀಸರ್ ಜೂನ್ 16ರಂದು ಬಿಡುಗಡೆ ಆಗಲಿದೆ.
ಈವರೆಗೂ ಆಕ್ಷನ್ ಅವತಾರದಲ್ಲಿ ಹೆಚ್ಚು ಮಿಂಚಿದ್ದ ಪ್ರಭಾಸ್ ಇದೇ ಮೊದಲ ಬಾರಿಗೆ “ದಿ ರಾಜಾ ಸಾಬ್” ಸಿನಿಮಾ ಮೂಲಕ ಹಾರರ್ ಪ್ರಯತ್ನಕ್ಕಿಳಿದಿದ್ದಾರೆ. ಮಾಳವಿಕಾ ಮೋಹನನ್, ನಿಧಿ ಅಗರವಾಲ್ ಮತ್ತು ರಿಧಿ ಕುಮಾರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಮಾರುತಿ ನಿರ್ದೇಶನದ “ದಿ ರಾಜಾ ಸಾಬ್” ಭಯ ಮತ್ತು ಮನರಂಜನೆಯ ವಿಶಿಷ್ಟ ಮಿಶ್ರಣ ನೀಡುವ ಸಿನಿಮಾ. ಈಗಾಗಲೇಬಿಡುಗಡೆಗೊಂಡಿರುವ ಪೋಸ್ಟರ್‌ಗಳು ಮತ್ತು ಝಲಕ್‌ಗಳು ಪ್ರೇಕ್ಷಕರನ್ನು ಆಶ್ಚರ್ಯ ಚಕಿತಗೊಳಿಸಿವೆ. ಮೊದಲ ಮೋಷನ್ ಪೋಸ್ಟರ್ ನಲ್ಲಿ ಸೂಪರ್ ನ್ಯಾಚುರಲ್ ಎಳೆಯ ಹಿಂಟ್ ಕೊಟ್ಟಿದೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವ ಪ್ರಸಾದ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಬಿಗ್ ಬಜೆಟ್ ನಲ್ಲಿ ಮೂಡಿಬರುತ್ತಿದೆ ಚಿತ್ರಕ್ಕೆ ಕಾರ್ತಿಕ್ ಪಲನಿ ಛಾಯಾಗ್ರಹಣ , ಥಮನ್ ಎಸ್ ಸಂಗೀತ ನೀಡುತ್ತಿದ್ದಾರೆ.
—

Be the first to comment