ಹೊಸಬರಿಂದ ಕೂಡಿರುವ ಗ್ಲೋಬಲ್ ಎಂಟರ್ಟೈನ್ಮೆಂಟ್ ನೆಟ್ವರ್ಕ್ ನಿರ್ಮಾಣದ ‘ದ ಪ್ರೆಸೆಂಟ್’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ.
ಚಿತ್ರವನ್ನು ಶಿವಪೂರ್ಣ ನಿರ್ದೇಶಿಸುತ್ತಿದ್ದಾರೆ. ರಾಜೀವ್ ರಾಥೋಡ್ ನಾಯಕನಾಗಿ ನಟಿಸುತ್ತಿದ್ದಾರೆ. ದಿಯಾ, ಮಾನಸಗೌಡ ನಾಯಕಿಯರು. ಬೇಬಿ ಆರಾಧ್ಯ, ಅವಿನಾಶ್, ಶ್ರೀಧರ್ ಮುಂತಾದವರು ನಟಿಸುತ್ತಿದ್ದಾರೆ.
”ಚಿತ್ರಕಥೆ ಸಿದ್ಧಪಡಿಸಲು ಒಂದು ವರ್ಷ ಸಮಯ ತೆಗೆದುಕೊಂಡಿದೆ. ಒಂದು ಆತ್ಮದ ಮೂರು ಜನ್ಮದ ಕಥೆ ಒಳಗೊಂಡಿದೆ. ಭೂತ, ಭವಿಷ್ಯ, ವರ್ತಮಾನ ಎಂದು ಮೂರು ಭಾಗಗಳಲ್ಲಿ ಬರಲಿದೆ. ಬೆಂಗಳೂರು ಮತ್ತು ಕೇರಳದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗುವುದು” ಎಂದು ನಿರ್ದೇಶಕ ಶಿವಪೂರ್ಣ ಹೇಳಿದ್ದಾರೆ.
ಚಿತ್ರಕ್ಕೆ ಪ್ರಶಾಂತ್ ಸಿದ್ದಿ ಸಂಗೀತವಿದೆ. ಟಾಲಿವುಡ್ನಲ್ಲಿ ಹೆಸರು ಮಾಡಿರುವ ಹಿರಿಯ ಛಾಯಾಗ್ರಾಹಕ ಪ್ರಸಾದ್ ಪುಲಿಚರ್ಲ ನಮ್ಮ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ.
—–

Be the first to comment