ಚಿತ್ರ: ದಿ ಫಿಲಂ ಮೇಕರ್
ನಿರ್ದೇಶನ: ಆರ್ಯ ಎಸ್ ರೆಡ್ಡಿ
ಪಾತ್ರವರ್ಗ: ಸುನೀಲ್
ರೇಟಿಂಗ್: 3/5
ಒಬ್ಬನೇ ಪಾತ್ರಧಾರಿಯ ಸುತ್ತ ಸಾಗುವ ದಿ ಫಿಲಂ ಮೇಕರ್ ಚಿತ್ರ ಲಾಕ್ಡೌನ್ ನಂತರದ ವ್ಯಕ್ತಿಯ ಅನಿರೀಕ್ಷಿತ ಸಂದರ್ಭದಲ್ಲಿ ಬದುಕು, ಪರಿಣಾಮದ ಬಗ್ಗೆ ಬೆಳಕು ಚೆಲ್ಲುತ್ತದೆ.
ಕ್ರಿಯೇಟಿವ್ ಕಾನ್ಸೆಪ್ಟ್ ಇಟ್ಟುಕೊಂಡು ಚಿಕ್ಕ ತಂಡವೊಂದು ಉತ್ತಮ ಸಿನಿಮಾವನ್ನು ತಯಾರಿಸುವ ಯತ್ನ ಮಾಡಿದೆ. ಲಾಕ್ಡೌನ್ ನಂತರದಲ್ಲಿ ವ್ಯಕ್ತಿಯೊಬ್ಬನ ಬದುಕು ಮತ್ತು ವೃತ್ತಿಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನು ಚಿತ್ರದಲ್ಲಿ ಏಕ ಪಾತ್ರಧಾರಿ ಆಗಿರುವ ಸುನಿಲ್ ಸಮರ್ಥವಾಗಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಜೊತೆಗೆ ಚಿತ್ರದಲ್ಲಿ ಇಂದಿನ ಜನರಿಗೆ ಅಗತ್ಯವಾದ ಸಂದೇಶವನ್ನು ನೀಡುವ ಯತ್ನವನ್ನು ಕೂಡ ಮಾಡಲಾಗಿದೆ.
ಚಿತ್ರಕ್ಕೆ ಆರ್ಯ ಅವರ ಸಿನಿಮಾಟೋಗ್ರಫಿ ಇದೆ. ಇದೊಂದು ಪ್ರಯೋಗಾತ್ಮಕ ಚಿತ್ರ ಆಗಿದ್ದರೂ, ನೋಡುಗರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.
ಚಿತ್ರ ಸಸ್ಪೆನ್ಸ್ ಆಗಿದ್ದು, ಚಿತ್ರ ತಯಾರಿಸಲು ಡೈರೆಕ್ಟರ್ ಯಾವ ರೀತಿ ಲಾಕ್ ಡೌನ್ ನಲ್ಲಿ ಸಂಕಷ್ಟ ಪಡುತ್ತಾನೆ ಎನ್ನುವುದು ಪ್ರೇಕ್ಷಕರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.
________
Be the first to comment