ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ‘ಡೆವಿಲ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಕೇವಲ 2 ಗಂಟೆಯಲ್ಲಿ 7.5 ಲಕ್ಷ ಮಂದಿ ಟ್ರೇಲರ್ ವೀಕ್ಷಿಸಿದ್ದಾರೆ. ದರ್ಶನ್ ಅವರು ಟ್ರೇಲರ್ನಲ್ಲಿ ಹಲವು ಗೆಟಪ್ಗಳಲ್ಲಿ ಕಾಣಿಸಿಕೊಂಡಿದ್ದಾರೆ .ಅವರ ಸ್ಟೈಲಿಶ್ ಲುಕ್, ಮಾಸ್ ಡೈಲಾಗ್ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ‘ಸೂರ್ಯಂಗೆ ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ. ನಾನು ಬರ್ತಿದೀನಿ ಚಿನ್ನ’ ಎಂದು ದರ್ಶನ್ ಡೈಲಾಗ್ ಹೇಳುವಾಗ ರಿಲೀಸ್ ದಿನಾಂಕ ತೋರಿಸಲಾಗಿದೆ.
ಡೆವಿಲ್’ ಸಿನಿಮಾದಲ್ಲಿ ದರ್ಶನ್ಗೆ ನಾಯಕಿಯಾಗಿ ರಚನಾ ರೈ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಶರ್ಮಿಳಾ ಮಾಂಡ್ರೆ, ಶೋಭರಾಜ್ ಮೊದಲಾದವರು ನಟಿಸಿದ್ದಾರೆ.
‘ಡೆವಿಲ್’ ಸಿನಿಮಾಗೆ ಪ್ರಕಾಶ್ ವೀರ್ ನಿರ್ದೇಶನವಿದೆ. ಪ್ರಕಾಶ್ ಹಾಗೂ ಜಯಮ್ಮ ಚಿತ್ರ ನಿರ್ಮಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕೆ ಇದೆ.
‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಗುತ್ತಿದೆ. ಸಿನಿಮಾ ಬಗ್ಗೆ ಟ್ರೇಲರ್ ನಿರೀಕ್ಷೆ ಹೆಚ್ಚಿಸಿದೆ. ಚಿತ್ರದ ಮೊದಲ ಪ್ರದರ್ಶನ ಡಿಸೆಂಬರ್ 11ರಂದು ಬೆಳಿಗ್ಗೆ 6.30 ರಿಂದ ಆರಂಭವಾಗಲಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಅವರು ಜೈಲಿನಲ್ಲಿದ್ದಾರೆ. ಅಭಿಮಾನಿಗಳು ಮತ್ತು ಚಿತ್ರತಂಡ ಪ್ರಚಾರದಲ್ಲಿ ನಿರತವಾಗಿದೆ.
—-





Be the first to comment