ದರ್ಶನ್ ಅವರ ‘ದಿ ಡೆವಿಲ್’ ಚಿತ್ರದ ಮೊದಲ ಹಾಡು ‘ಇದ್ರೇ ನೆಮ್ದಿಯಾಗ್ ಇರ್ಬೇಕ್’ ಮೇಲೆ ಟ್ಯೂನ್ ಕದ್ದ ಆರೋಪ ಕೇಳಿ ಬಂದಿದೆ.
ಸಂಚಾರಿ ವಿಜಯ್ ಅಭಿನಯಿಸಿರುವ ‘ನಾನು ಅವನಲ್ಲ ಅವಳು’ ಸಿನಿಮಾದ ಟ್ಯೂನ್ ಕದ್ದ ಆರೋಪ ಕೇಳಿ ಬಂದಿದೆ. ಇದು ಕದ್ದ ಹಾಡು ಎಂದು ಹಲವರು ವಾದ ಮಾಡಿ ಅದಕ್ಕೆ ಬೇಕಾದ ಸಾಕ್ಷ್ಯ ನೀಡುತ್ತಿದ್ದಾರೆ.
‘ಇದ್ರೇ ನೆಮ್ದಿಯಾಗ್ ಇರ್ಬೇಕ್’ ಹಾಡು ಈಗ ಅಭಿಮಾನಿಗಳ ನೆಚ್ಚಿನ ಗೀತೆಯಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ವೀಕ್ಷಣೆ ಜೊತೆಗೆ ಟ್ರೆಂಡ್ ಆಗುವ ಮೂಲಕ ದಾಖಲೆ ಬರೆದಿದೆ.
ರಿಲೀಸ್ ಆದ ಕೇವಲ 24 ಗಂಟೆಗಳಲ್ಲಿ ಯೂಟ್ಯೂಬ್ನಲ್ಲಿ ಸ್ಯಾಂಡಲ್ವುಡ್ನ ಫಾಸ್ಟೆಸ್ಟ್ 10 ಮಿಲಿಯನ್+ ವ್ಯೂವ್ಸ್’ ರೆಕಾರ್ಡ್ ಕ್ರಿಯೇಟ್ ಮಾಡಿದ ಈ ಹಾಡು ಯೂಟ್ಯೂಬ್ನಲ್ಲಿ ನಂ 1 ಟ್ರೆಂಡಿಂಗ್ನಲ್ಲಿದೆ. ಈ ಮಾಹಿತಿಯನ್ನು ಚಿತ್ರತಂಡ ತನ್ನ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಹಂಚಿಕೊಂಡಿದೆ.
ಜೈ ಮಾತಾ ಕಂಬೈನ್ಸ್ ಲಾಂಛನದಲ್ಲಿ ಪ್ರಕಾಶ್ ವೀರ್ ನಿರ್ದೇಶಿಸಿ, ನಿರ್ಮಿಸಿರುವ ಡೆವಿಲ್ ಸಿನಿಮಾ ಡಿಸೆಂಬರ್ 12ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ. ಸಿನಿಮಾ ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ.
ರರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಸೇರಿದಂತೆ 7 ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಆಗಸ್ಟ್ 14ರಂದು ದರ್ಶನ್ ತೂಗುದೀಪ ಸೇರಿದಂತೆ 7 ಆರೋಪಿಗಳು ಅರೆಸ್ಟ್ ಆಗಿ ಮತ್ತೆ ಜೈಲು ಸೇರಿದ್ದಾರೆ.
ದರ್ಶನ್ ಜೈಲಿನಲ್ಲಿ ಇರುವಾಗಲೇ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ.





Be the first to comment