ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಚಿತ್ರ ‘ದಿ ಡೆವಿಲ್’ ಬಾಲಿವುಡ್‌ನ ಧುರಂಧರ್ ಮತ್ತು ಅಖಂಡ 2 ಚಿತ್ರಗಳ ಸ್ಪರ್ಧೆಯ ಹೊರತಾಗಿಯೂ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಓಟವನ್ನು ಮುಂದುವರಿಸಿದೆ.
‘ದಿ ಡೆವಿಲ್’ ನಾಲ್ಕನೇ ದಿನದ ಸಂಗ್ರಹ 4.25 ಕೋಟಿ ರೂ.ಗಳನ್ನು ದಾಟಿದ್ದು, ಒಟ್ಟು ಗಳಿಕೆ 25 ಕೋಟಿ ರೂ.ಗಳನ್ನು ಮೀರಿದೆ. ಕರ್ನಾಟಕದಾದ್ಯಂತ ಸಿಂಗಲ್-ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಚಿತ್ರವು ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ ಚಿತ್ರದ ಗಳಿಕೆ 25 ಕೋಟಿ ರೂ.ಗಳನ್ನು ದಾಟಿದ್ದು, ದರ್ಶನ್ ಅನುಪಸ್ಥಿತಿಯಲ್ಲೂ ‘ದಿ ಡೆವಿಲ್’ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಬಾಕ್ಸ್ ಆಫೀಸ್ ಮೂಲಗಳ ಪ್ರಕಾರ ದಿ ಡೆವಿಲ್ ಮೊದಲ ದಿನ 13.80 ಕೋಟಿ ರೂ., ಎರಡನೇ ದಿನ ಸುಮಾರು 3.40 ಕೋಟಿ ರೂ., , 3ನೇ ದಿನ 3.80 ಕೋಟಿ ರೂ. ಗಳಿಕೆ ಕಂಡಿದೆ. ವಾರಾಂತ್ಯದಲ್ಲಿ ಚಿತ್ರವು ಸ್ಥಿರವಾದ ಪ್ರದರ್ಶನವನ್ನು ಕಾಯ್ದುಕೊಂಡಿದೆ.
‘ದಿ ಡೆವಿಲ್’ ಚಿತ್ರವನ್ನು ಶ್ರೀ ಜೈಮಾತಾ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಜೆ ಜಯಮ್ಮ ಮತ್ತು ಪ್ರಕಾಶ್ ವೀರ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಪ್ರಕಾಶ್ ವೀರ್ ಕಥೆ ಮತ್ತು ಚಿತ್ರಕಥೆ ಬರೆದಿದ್ದು, ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ರಚನಾ ರೈ, ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಹುಲಿ ಕಾರ್ತಿಕ್, ಚಂದು ಗೌಡ, ರೋಜರ್ ನಾರಾಯಣ್, ವಿನಯ್ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
—–





Be the first to comment