ಸಿನಿಮಾ: ತರ್ಕ
ನಿರ್ಮಾಣ: ರಶ್ಮಿತಾ ಸಂತೋಷ್ ಕುಮಾರ್
ನಿರ್ದೇಶನ: ಪುನೀತ್ ಮಾನವ
ಪಾತ್ರವರ್ಗ: ಅಂಜನ್ ಮೂರ್ತಿ, ಪ್ರತಿಮಾ ಠಾಕೂರ್, ಶ್ವೇತಾ ಶ್ರೀನಿವಾಸ್, ನಿವಾಸ್ ಮುಂತಾದವರು.
ರೇಟಿಂಗ್: 3.5
ರಶ್ಮಿತಾ ಸಂತೋಷ್ ಕುಮಾರ್ ನಿರ್ಮಾಣದಲ್ಲಿ, ಪುನೀತ್ ಮಾನವ ನಿರ್ದೇಶನದಲ್ಲಿ ಮೂಡಿಬಂದಿರುವ ‘ತರ್ಕ’ ಸಿನಿಮಾ, ಹೆಸರಿನಿಂದಲೇ ಕುತೂಹಲ ಮೂಡಿಸಿತ್ತು. 1989ರಲ್ಲಿ ಸುನಿಲ್ ಕುಮಾರ್ ದೇಸಾಯಿ ನಿರ್ದೇಶಿಸಿದ್ದ ‘ತರ್ಕ’ ಚಿತ್ರದ ಹೆಸರನ್ನೇ ಈ ಚಿತ್ರಕ್ಕೂ ಇಟ್ಟಿರುವುದು ಸಹಜವಾಗಿ ನಿರೀಕ್ಷೆ ಹುಟ್ಟಿಸಿತ್ತು. ಆದರೆ, ಈ ಎರಡು ಚಿತ್ರಗಳಿಗೂ ಯಾವುದೇ ಸಂಬಂಧವಿಲ್ಲ.
‘ತರ್ಕ’ ಚಿತ್ರದ ಕಥೆ ಸ್ಥಳೀಯ ಹುಡುಗರ ಪ್ರೇಮಕಥೆಯ ಸುತ್ತ ಸಾಗುತ್ತದೆ. ಸದಾ ಎಣ್ಣೆ ಪಾರ್ಟಿ, ಸಣ್ಣಪುಟ್ಟ ಕಿರಿಕ್ ಮಾಡಿಕೊಳ್ಳುವ ಹುಡುಗರ ಜೀವನದಲ್ಲಿ ಪ್ರೀತಿ ಚಿಗುರಿದರೆ ಏನೆಲ್ಲಾ ಆಗಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.
ಚಿತ್ರದ ಮೊದಲಾರ್ಧ ಬೇರೆಯೇ ರೀತಿ ಇದ್ದರೆ, ದ್ವಿತೀಯಾರ್ಧ ಸಂಪೂರ್ಣ ಭಿನ್ನವಾಗಿದೆ. ಮೊದಲ ಭಾಗದಲ್ಲಿ ಪ್ರೇಮಕಥೆ ಇದ್ದರೆ, ದ್ವಿತೀಯಾರ್ಧದಲ್ಲಿ ಗಂಭೀರ ವಿಷಯದ ಬಗ್ಗೆ ನಿರ್ದೇಶಕರು ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ.
‘ತರ್ಕ’ ಚಿತ್ರದಲ್ಲಿ ಬಹುತೇಕ ಹೊಸ ಕಲಾವಿದರು ನಟಿಸಿದ್ದಾರೆ. ಅಂಜನ್ ಮೂರ್ತಿ, ಪ್ರತಿಮಾ ಠಾಕೂರ್, ಶ್ವೇತಾ ಶ್ರೀನಿವಾಸ್, ನಿವಾಸ್ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.

Be the first to comment