ಚಿತ್ರ: ತಾರಕೇಶ್ವರ
ನಿರ್ದೇಶನ: ಪುರುಷೋತ್ತಮ್ ಓಂಕಾರ್
ನಿರ್ಮಾಣ: ಜಿಆರ್ ಫಿಲಂಸ್
ತಾರಾಗಣ: ಗಣೇಶ್ ರಾವ್ ಕೇಸರಕರ್, ರೂಪಾಲಿ, ನಮಿತಾ ರಾವ್, ವಿಕ್ರಂ ಸೂರಿ, ಎನ್ ಟಿ ರಾಮಸ್ವಾಮಿ, ಶಂಕರ್ ಭಟ್, ಋತುಸ್ಪರ್ಶ, ಪ್ರಜ್ವಲ್ ಕೇಸರಕರ್ ಇತರರು
ರೇಟಿಂಗ್: 3
ಈ ವಾರ ಬಿಡುಗಡೆಯಾದ ಪುರುಷೋತ್ತಮ್ ಓಂಕಾರ್ ನಿರ್ದೇಶನದ ‘ತಾರಕೇಶ್ವರ’ ಚಿತ್ರವು ಶಿವಪುರಾಣದಲ್ಲಿನ ಪ್ರಸಿದ್ಧ ಕಥೆಯನ್ನು ಆಧರಿಸಿದ್ದು, ತಾರಕಾಸುರನ ಅಟ್ಟಹಾಸ ಮತ್ತು ಶಿವಕುಮಾರನ ವೀರಗಾಥೆಯನ್ನು ಬಿಂಬಿಸುತ್ತದೆ.
ಗಣೇಶ್ ರಾವ್ ಕೇಸರಕರ್ ಈ ಚಿತ್ರದಲ್ಲಿ ಶಿವ ಮತ್ತು ತಾರಕಾಸುರ ಎರಡೂ ಪಾತ್ರಗಳಲ್ಲಿ ಅದ್ಭುತ ಅಭಿನಯ ನೀಡಿದ್ದು ಎಲ್ಲರ ಗಮನ ಸೆಳೆದಿದ್ದಾರೆ. ತಾರಕಾಸುರನ ಪಾತ್ರದಲ್ಲಿ ಅವರ ಅಭಿನಯ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದೆ. ದೇವಿ ಪಾರ್ವತಿಯ ಪಾತ್ರದಲ್ಲಿ ನಟಿ ರೂಪಾಲಿ ಅವರು ಗಮನ ಸೆಳೆಯುವ ಅಭಿನಯ ನೀಡಿದ್ದಾರೆ. ಗಣೇಶ್ ರಾವ್ ಕೇಸರಕರ್ ಅವರ ಪುತ್ರ ಪ್ರಜ್ವಲ್ ಕೇಸರಕರ್ ಇಂದ್ರನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಸ್ಕಂದನಾಗಿ ಟೆಕ್ವಾಡೋ ಗರ್ಲ್ ಖ್ಯಾತಿಯ ಬಾಲನಟಿ ರುತುಸ್ಪರ್ಷ ಅವರ ಅಭಿನಯ ಇಡೀ ಚಿತ್ರದ ಹೈಲೈಟ್.
ಜಿಆರ್ ಫಿಲಂಸ್ ಸಂಸ್ಥೆಯ ಮೂಲಕ ಗಣೇಶ್ ರಾವ್ ಕೇಸರಕರ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪುರುಷೋತ್ತಮ್ ಓಂಕಾರ್ ಅವರು ಸ್ಕಂದ ಪುರಾಣವನ್ನು ಆಧರಿಸಿ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಅಕ್ಷನ್ ಕಟ್ ಹೇಳಿದ್ದಾರೆ.
ಚಿತ್ರದ ಗ್ರಾಫಿಕ್ಸ್ ಕೆಲಸ, ಪುರಾತನ ಕಾಲದ ವಾತಾವರಣವನ್ನು ನಿಖರವಾಗಿ ಬಿಂಬಿಸಲಾದ ಸೆಟ್ಟಿಂಗ್, ನಟರ ಅದ್ಭುತ ಅಭಿನಯ ಮತ್ತು ರಾಜ್ ಭಾಸ್ಕರ್ ಅವರ ಸಂಗೀತ ಚಿತ್ರಕ್ಕೆ ಮತ್ತೊಂದು ಆಯಾಮವನ್ನು ನೀಡಿದೆ. ಒಟ್ಟಿನಲ್ಲಿ, ತಾರಕಾಸುರ ಚಿತ್ರವು ಕೇವಲ ಮನರಂಜನೆ ಮಾತ್ರವಲ್ಲದೆ, ನಮ್ಮ ಪುರಾಣಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನೂ ಮಾಡಿದೆ.
Be the first to comment